2024-12-24 06:42:28

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕುದುರೆ ಏರಿ ಬಂದ ಕಮಲ್ ಹಾಸನ್..! 

ಕಮಲ್ ಹಾಸನ್ ಮತ್ತು ಆರ್.ಶಂಕರ್  ಜೋಡಿಯ ಇಂಡಿಯನ್ 2 ಸಿನಿಮಾ ಜುಲೈ 12ಕ್ಕೆ ವರ್ಲ್ಡ್ ವೈಡ್  ರಿಲೀಸ್ ಆಗಲಿದ್ದು, ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಈ ಸಿನಿಮಾದ ಮೊದಲ ಸಾಂಗ್ ಕೂಡ ಬಿಡುಗಡೆ ಆಗಿದೆ. ಇದು ಕಮಲ್ ಹಾಸನ್ ಫ್ಯಾನ್ಸ್‌ಗಳಿಗೆ ಖುಷಿಯಾಗಿದೆ. 
ಇಂಡಿಯನ್ 2 ಸಿನಿಮಾದ ಸೌರಾ ಎಂಬ ಸಾಂಗ್ ರಿಲೀಸ್ ಆಗಿದ್ದು ಕುದುರೆ ಏರಿ ಬರುವ ಸೇನಾಪತಿ ಸಾಹಸ ಕಥೆಯನ್ನು ವರ್ಣಿಸುವ ಈ ಹಾಡಿಗೆ ಅಶೋಕ್ ತೇಜ್ ಸಾಹಿತ್ಯ ಬರೆದಿದ್ದಾರೆ. ರಿತೇಶ್ ಜಿ ರಾವ್ ಮತ್ತು ಶೃತಿಕಾ ಸಮುದ್ರಾ ಸೌರಾ ಹಾಡಿಗೆ ಧ್ವನಿಗೂಡಿಸಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನ ಸೇನಾಪತಿಯಾಗಿ ಕಮಲ್ ಹಾಸನ್ ನಟಿಸಿದ್ದು,‌ ಈ ಹಾಡಿಗೆ ಅನಿರುದ್ಧ್ ಟ್ಯೂನ್ ಹಾಕಿದ್ದಾರೆ.
ಇಂಡಿಯನ್ 1  ಚಿತ್ರ  ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿತ್ತು. ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ದ್ವಿಪಾತ್ರ ನಿಭಾಯಿಸಿದ್ದರು. ಇಂಡಿಯನ್ 2  1996 ರ ಹಿಟ್ ಚಲನಚಿತ್ರ ಇಂಡಿಯನ್‌ನ ಮುಂದುವರಿದ ಭಾಗವಾಗಿದ್ದು, ಇದರಲ್ಲೂ ಕಮಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್, ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

Post a comment

No Reviews