2024-09-19 04:56:13

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಜೂನ್‌ 14ರಂದು ಡಾಲಿ-ವಸಿಷ್ಠ ಸಿಂಹಗೆ ಅಗ್ನಿಪರೀಕ್ಷೆ

ಕುಚಿಕು ಗೆಳೆಯರಾದ ಡಾಲಿ ಮತ್ತು ವಸಿಷ್ಠ ಸಿಂಹ ನಟಿಸಿರುವ ಸಿನಿಮಾ ಒಂದೇ ದಿನ ರಿಲೀಸ್‌ಗೆ ರೆಡಿಯಾಗಿದೆ. ಡಾಲಿ ನಟಿಸಿರುವ ‘ಕೋಟಿ’ ಚಿತ್ರ ಮತ್ತು ವಸಿಷ್ಠ ಸಿಂಹ ನಟನೆಯ ‘ಲವ್ ಲಿ’ ಸಿನಿಮಾ ಒಂದೇ ದಿನ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದೆ.
ಡಾಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಹಲವು ವರ್ಷಗಳಿಂದ ಸ್ನೇಹಿತರು. ಈ ಹಿಂದೆ ಒಂದೇ ಸಿನಿಮಾದಲ್ಲಿ ನಟಿಸುವ ಮೂಲಕ ಇಬ್ಬರ ಕಾಂಬಿನೇಷನ್ ಕ್ಲಿಕ್ ಆಗಿತ್ತು. ಅದಕ್ಕೆ ತಾಜಾ ಉದಾಹರಣೆ ಅಂದರೆ ‘ಟಗರು’ ಚಿತ್ರ. ಆದರೆ ಈಗ ಒಂದೇ ದಿನ ಬೇರೆ ಬೇರೆ ಸಿನಿಮಾಗಳ ಮೂಲಕ ಡಾಲಿ ಮತ್ತು ವಸಿಷ್ಠ ಬರುತ್ತಿದ್ದಾರೆ.
ಜೂನ್ 14ರಂದು ಡಾಲಿ ಧನಂಜಯ ನಟಿಸಿರುವ ಕೋಟಿ ಸಿನಿಮಾ ರಿಲೀಸ್ ಆಗುತ್ತಿದೆ, ಅದೇ ದಿನ ವಸಿಷ್ಠ ಸಿಂಹ ನಟಿಸಿರುವ ‘ಲವ್ ಲಿ’ ಸಿನಿಮಾ ಕೂಡ ರಿಲೀಸ್ ಆಗುತ್ತಿರೋದು ವಿಶೇಷ. ಮೊದಲ ಬಾರಿಗೆ ಕುಚಿಕು ಗೆಳೆಯರು ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಇಬ್ಬರ ಸಿನಿಮಾ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದೆ
ಎರಡು ಸಿನಿಮಾಗಳ ಟ್ರೈಲರ್ ಮತ್ತು ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು. ಇದೀಗ ಧನಂಜಯ ನಟನೆಯ ‘ಕೋಟಿ’ ಚಿತ್ರ ಗೆಲ್ಲುತ್ತಾ ಅಥವಾ ವಸಿಷ್ಠ ನಟಿಸಿರುವ ‘ಲವ್ ಲಿ’ ಚಿತ್ರ ಗೆದ್ದು ಬೀಗುತ್ತಾ ಎಂದು ಕಾದುನೋಡಬೇಕಿದೆ. ಜೂನ್ 14ರ ಪರೀಕ್ಷೆಯಲ್ಲಿ ಯಾರು ಪಾಸಾಗ್ತಾರೆ ಅನ್ನೊದು ಕುತೂಹಲ ಮೂಡಿಸಿದೆ.

Post a comment

No Reviews