ಜ್ಯೂನಿಯರ್ ಕೊರಿಯೋಗ್ರಾಫರ್ಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಲ್ಲಿರುವ ಜಾನಿ ಮಾಸ್ಟರ್ ಕೊನೆಗೂ ತಪ್ಪೊಪ್ಪಿಕೊಂಡಿದ್ದಾರೆ. 2020ರಲ್ಲಿ 16 ವರ್ಷದ ಬಾಲಕಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದ ಮಾಸ್ಟರ್, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಗಂಭೀರ ಆರೋಪದಲ್ಲಿ ಬಂಧಿತರಾಗಿದ್ದಾರೆ.
ಆರೋಪಿ ಜಾನಿ ಮಾಸ್ಟರನ್ನು ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗಿದ ಆರೋಪದ ಮೇಲೆ ಈಗಾಗಲೇ ಹೈದರಾಬಾದ್ಗೆ ಕರೆತರಲಾಗಿದ್ದು, ರಿಮ್ಯಾಂಡ್ ರಿಪೋರ್ಟ್ನಲ್ಲಿ ವಿಚಾರಣೆ ನಡೆಸಿದಾಗ ಜಾನಿ ಮಾಸ್ಟರ್ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ನಾಲ್ಕು ವರ್ಷಗಳಲ್ಲಿ ಅನೇಕ ಬಾರಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಮತ್ತೊಂದು ಕಡೆ ಗಮನಾರ್ಹ ಎಂದರೆ ಜಾನಿ ಮಾಸ್ಟರ್ ಪತ್ನಿ ಕೂಡ ಸಂತ್ರಸ್ತೆಗೆ ಬೆದರಿಕೆ ಹಾಕುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಪೊಲೀಸರು ಕೋರ್ಟಿಗೆ ಹೇಳಿದ್ದೇನು..?
2019ರಲ್ಲಿ ಜಾನಿ ಮಾಸ್ಟರ್ ಹಾಗೂ ಸಂಸ್ತ್ರಸ್ತೆಯ ಭೇಟಿ ಆಗುತ್ತದೆ. 2020ರಲ್ಲಿ ಅವರನ್ನುಆಯ್ಕೆ ಮಾಡಿಕೊಳ್ಳುತ್ತಾರೆ. ಆ ಬಳಿಕ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಾರೆ. ಅಲ್ಲದೆ, ಕರಿಯರ್ನ ಕೊನೆಗೊಳಿಸುವುದಾಗಿ ಅವರು ಎಚ್ಚರಿಕೆ ಕೂಡ ನೀಡಿದ್ದರು. ಇದರಿಂದ ಸಂತ್ರಸ್ತೆ ಸಾಕಷ್ಟು ಹೆದರಿದ್ದರು. ಆ ಯುವತಿಗೆ ಕೆಲವು ಸಿನಿಮಾ ಆಫರ್ಗಳು ತಪ್ಪಿ ಹೋಗಲು ಜಾನಿ ಮಾಸ್ಟರ್ ಕೂಡ ಕಾರಣ ಆಗಿದ್ದರು.
Post a comment
Log in to write reviews