
ಮುಂಬೈ :ರಿಲಯನ್ಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬೋನಸ್ ಷೇರುಗಳ ಪ್ರಾಸ್ತಾಪ ಮಾಡಿ ದೀಪಾವಳಿ ಕೊಡುಗೆಯಾಗಿ ಜಿಯೋ ಬಳಕೆದಾರರಿಗೆ ಕೃತಕ ಬುದ್ದಿ ಮತ್ತೆ ಕ್ಲೌಡ್ ಸೇವೆಗಳ 100 ಜಿಬಿ ಸ್ಟೋರೇಜ್ ಉಚಿತವಾಗಿ ನೀಡುವುದಾಗಿ ಘೊಷಿಸಿದೆ.
ಇದರಿಂದಾಗಿ ಜಿಯೋ ಬಳಕೆ ದಾರರು ತಮ್ಮ ಫೋಟೋ ದಾಖಲೆಗಳು ವೀಡಿಯೋ ಹಾಗು ಇನ್ನಿತರ ಮಾಹಿತಿಗಳನ್ನು ಉಚಿತವಾಗಿ ಸಂಗ್ರಹಿಸಿಟ್ಟುಕೊಳ್ಳಬುಹುದಾಗಿದೆ.
ಮುಂದಿನ ದಿನಗಳಲ್ಲಿ ರಿಲಯನ್ಸ್ ಅನ್ನು ವಿಶ್ವದ ಟಾಪ್ 30 ಕಂಪನಿಗಳಲ್ಲಿ ಒಂದಾಗಿ ಮಾಡಲು ಡೀಪ್ ಟೆಕ್ ಮತ್ತು ಸುಧಾರಿತ ಉತ್ಪಾದನೆಯ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಅಂಬಾನಿ ಹೇಳಿದ್ದಾರೆ ಹಾಗು ಗಿಗಾವ್ಯಾಟ್ ಸಾಮರ್ಥ್ಯದ ಕೃತಕ ಬುದ್ದಿ ಮತ್ತೆ ಡೇಟಾ ಸೆಂಟರ್ ಅನ್ನು ಗುಜರಾತ್‌ನ ಜಾಮ್ ನಗರದಲ್ಲಿ ಸ್ಥಾಪಿಸುದಾಗಿ ಹೇಳಿದರು.
ಕಂಪನಿಯ ಅಧ್ಯಕ್ಷ ಮುಕೇಶ್ ಅಂಬಾನಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ ಹೊಡಿಕೆದಾರರಿಗೆ1:1 ಅನುಪಾತದ ಬೋನಸ್ ಷೇರು ನೀಡಲು ಸ್ಟಾಕ್ ಎಕ್ಸ್‌ಚೇಂಜ್ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.
Poll (Public Option)

Post a comment
Log in to write reviews