
ದೇವರ ಈ ಸಿನಿಮಾ ಸಿನಿ ವೀಕ್ಷಕರಲ್ಲಿ ಯಾವ ಮಟ್ಟದ ಕುತೂಹಲ ಕೆರಳಿಸಿತ್ತೆಂದರೆ ಟಿಕೆಟ್ ದರ ಅಧಿಕವಾಗಿದ್ದರೂ ಬಿಡುಗಡೆಗೆ ಮೊದಲೆ ಸಿನಿಮಾದ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಯಾಕೆಂದರೆ ಸಿನಿಮಾದ ಸಾಂಗ್ಗಳು ಅಷ್ಟೊಂದು ಗಮನ ಸೆಳೆದಿದ್ದವು. ಯಾಕೆಂದ್ರೆ ಹಾಡಿನಲ್ಲಿ ಜೂನಿಯರ್ ಎನ್ಟಿಆರ್ (Jr. NTR) ಹಾಗೂ ಜಾನ್ವಿ ಕೆಮಿಸ್ಟ್ರಿ ಕೆಲಸ ಮಾಡಿತ್ತು.
ಹಾಗಾದ್ರೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಏನು? ಖಂಡಿತ ಇದೆ…
ʻದೇವರʼ ಸಿನಿಮಾದಲ್ಲಿ ಜಾನ್ವಿ ಕಪೂರ್ ನಟಿಸಿದ್ದಾರೆಂದು ಅನೇಕರು ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆ ಸುಳ್ಳಾಗುವ ಸೂಚನೆ ಸಿಕ್ಕಿದೆ. ಸಿನಿಮಾಗೆ ಎಲ್ಲೆಡೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಅದೇ ರೀತಿ ಜಾನ್ವಿ ಪಾತ್ರದ ಬಗ್ಗೆ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.
ಕಾರಣ ಸಿನಿಮಾ ನೋಡಿದವರಿಗೆ ಶಾಕ್ ಎದುರಾಗಿದೆ. ಅದೇನೆಂದರೆ ಜಾನ್ವಿ ಕಪೂರ್ ಅವರು ‘ದೇವರʼ ಸಿನಿಮಾದ ಮೊದಲಾರ್ಧದಲ್ಲಿ ಬರೋದೇ ಇಲ್ಲ. ದ್ವಿತೀಯಾರ್ಧದದಲ್ಲಿ ಅವರು ಕಾಣಿಸೋದು ಕೇವಲ ಒಂದು ಸಾಂಗ್ ಹಾಗೂ ಎರಡು ದೃಶ್ಯಗಳಲ್ಲಿ ಮಾತ್ರ ಅನ್ನೋದು ಬೇಸರದ ವಿಚಾರ.
ಹಾಗೆ ʻನಂಗೆ ವರನ (ಜೂನಿಯರ್ ಎನ್ಟಿಆರ್) ನೋಡಿದರೆ ಉಕ್ಕೋದೇ ಇಲ್ಲʼ, ‘ಹುಡುಗರನ್ನು ನೋಡಿದ ತಕ್ಷಣ ಉಕ್ಕಬೇಕುʼ ಎಂಬ ಡೈಲಾಗ್ಗೆ ಜಾನ್ವಿ ಸೀಮಿತ ಆಗಿದ್ದಾರೆ. ಅದರಲ್ಲೂ ಹೇಗೆ ಎಷ್ಟೇ ಲೆಕ್ಕ ಹಾಕಿದರೂ ಜಾನ್ವಿಗೆ ಮೂರಕ್ಕಿಂತ ಹೆಚ್ಚಿನ ದೃಶ್ಯ ಇಲ್ಲ ಅನ್ನೋದು ಫ್ಯಾನ್ಸ್ಗೆ ತೀರಾ ನಿರಾಸೆ ಮೂಡಿಸಿದೆ.
ʻದೇವರʼ ಸಿನಿಮಾ ಜಾನ್ವಿ ಕಪೂರ್ ನಟನೆಯ ಮೊದಲ ತೆಲುಗು ಸಿನಿಮಾವಾಗಿದ್ದು, ಈ ಕಾರಣಕ್ಕೆ ಫ್ಯಾನ್ಸ್ ಎಲ್ಲಿಲ್ಲದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿರ್ದೇಶಕರಿಂದ ಅವರ ಫ್ಯಾನ್ಸ್ ಬೇಸರಗೊಳ್ಳುವಂತಾಗಿದೆ.
Poll (Public Option)

Post a comment
Log in to write reviews