
ದೆಹಲಿ: ಟೋಲ್ ಹಣ ಕಟ್ಟುವಂತೆ ಕೇಳಿದ್ದಕ್ಕೆ ಜೆಸಿಬಿ ಚಾಲಕನೊಬ್ಬ ಎರಡು ಟೋಲ್ ಬೂತ್ ಅನ್ನು ನೆಲಸಮ ಮಾಡಿರುವ ಘಟನೆ ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ನಡೆದಿದೆ.
ದೆಹಲಿ-ಲಕ್ನೋ ಹೆದ್ದಾರಿ ಎನ್ಎಚ್-9ರ ಛಿಜರಾಸಿ ಟೋಲ್ ಪ್ಲಾಜಾನಲ್ಲಿ ಜೆಸಿಬಿ ಓಡಿಸಿಕೊಂಡು ಹೋಗುತ್ತಿದ್ದ.ಈ ವೇಳೆ ಟೋಲ್ ಪ್ಲಾಜಾದ ಸಿಬ್ಬಂದಿ ಟೋಲ್ ಕಟ್ಟುವಂತೆ ಸೂಚನೆ ನೀಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಜೆಸಿಬಿ ಡ್ರೈವರ್, ಬುಲ್ಡೋಸರ್ನಿಂದ ಟೋಲ್ ಪ್ಲಾಜಾವನ್ನು ಜಖಂಗೊಳಿಸಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ..
https://x.com/i/status/1800436520060621272
ಜೆಸಿಬಿ ಚಾಲಕ ಟೋಲ್ ಬೂತ್ ಮೂಲಕ ಹಾದುಹೋಗುತ್ತಿದ್ದ, ಹಾಗಾಗಿ ಟೋಲ್ ಸಿಬ್ಬಂದಿ ಹಣ ಕೇಳಿದ್ದಾರೆ ಅದಕ್ಕೆ ಚಾಲಕ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಟೋಲ್ ಮ್ಯಾನೇಜರ್ ಅಜಿತ್ ಚೌಧರಿ ತಿಳಿಸಿದ್ದಾರೆ. ಜೆಸಿಬಿ ಡಿಕ್ಕಿ ಹೊಡೆದ ರಭಸಕ್ಕೆ ಎರಡು ಟೋಲ್ ಬೂತ್‌ಗಳು ಮುರಿದು ಬಿದಿದ್ದು ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳು ಒಡೆದು ಸಾಕಷ್ಟು ಹಾನಿಯಾಗಿದೆ, ಈ ಕುರಿತು ಪಿಲ್ಖುವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ..
Poll (Public Option)

Post a comment
Log in to write reviews