
ಖ್ಯಾತ ಕವಿಯೆಂದೇ ಪ್ರಸಿದ್ಧಿಯಾಗಿರುವ ಶ್ರೀ ಯವರು ಬರೆದಿರುವ ʼಜಯ ಜಯ ಹೇ ತೆಲಂಗಾಣʼ ಎಂಬ ಗೀತೆಯನ್ನು ತೆಲಂಗಾಣದ ರಾಜ್ಯಗೀತೆಯಾಗಿ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಘೊಷಿಸಿದ್ದಾರೆ.
ಶ್ರೀ ಯವರು ಈ ಗೀತೆಯನ್ನು 20 ವರ್ಷಗಳ ಹಿಂದೆ ಬರೆದಿದ್ದರು. ಪ್ರಸ್ತುತ ಜೂನ್ 2 ರಂದು ರಾಜ್ಯ ರಚನೆಯ ದಿನದ ಅಂಗವಾಗಿ ಈ ಗೀತೆ ರಾಜ್ಯಗೀತೆಯಾಗಿ ಬಿಡುಗಡೆಯಾಗಲಿದೆ ಎಂದು ತೆಲಂಗಾಣ ಸರ್ಕಾರ ತಿಳಿಸಿದೆ.
ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಈ ಹಾಡಿಗೆ ಸಂಗೀತ ಸಂಯೋಜಿಸಿ ಹಾಡಿದ್ದು, ಗೀತೆಯನ್ನು ಎರಡು ಆವೃತ್ತಿಗಳಲ್ಲಿ ನಿರ್ಮಿಸಲಾಗಿದೆ. ಹಾಡಿನ ಮೊದಲ ಆವೃತ್ತಿಯು ಎರಡೂವರೆ ನಿಮಿಷಗಳವರೆಗೆ ಇರಲಿದ್ದು, ಎರಡನೇ ಆವೃತ್ತಿ ಪೂರ್ಣ ಹದಿಮೂರುವರೆ ನಿಮಿಷಗಳ ನಿರೂಪಣೆಯಾಗಿದೆ. ಮೂರು ಚರಣಗಳನ್ನು ಹೊಂದಿರುವ ಚಿಕ್ಕ ಆವೃತ್ತಿಯನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಲಾಗುತ್ತದೆ. ಎರಡೂ ಆವೃತ್ತಿಗಳನ್ನು ರಾಜ್ಯ ಗೀತೆಗಳಾಗಿ ಪರಿಗಣಿಸಲಾಗುವುದು ಎಂದು ಸಿಎಂ ರೆಡ್ಡಿ ಹೇಳಿದ್ದಾರೆ.
Poll (Public Option)

Post a comment
Log in to write reviews