ಬಾಗಲಕೋಟೆ: ಜಮಖಂಡಿ ತಾಲೂಕಿನ ಲೋಕೋಪಯೋಗಿ ಇಲಾಖೆಯ ವಸತಿಗೃಹಗಳ ಮೂಲಭೂತ ಸೌಕರ್ಯ ದೇವರಿಗೆ ಪ್ರೀತಿ. ಸ್ವತಂತ್ರ ಸಿಕ್ಕು ಹಲವು ವರ್ಷ ಆದರೂ ಸಹ ಇಲ್ಲಿನ ನೌಕರರಿಗೆ ಇನ್ನು ಸ್ವತಂತ್ರ ಇಲ್ಲದಂತಾಗಿದೆ. ದೇಶದ ಅಭಿವೃದ್ಧಿ ಮಾಡುವ ಇಂಜಿನಿಯರ್‌ಗಳು ವಾಸಿಸುವ ಸ್ಥಳವೇ ಕುಂಠಿತವಾಗಿದೆ. ಲೋಕೋಪಯೋಗಿ ಇಲಾಖೆಯ ವಸತಿಗೃಹಕ್ಕೆ ಕಾಂಕ್ರೀಟ್ ರಸ್ತೆ ಮಾಡಿ ಕೈ ತೊಳೆದುಕೊಂಡಿದ್ದಾರೆ. ಆದರೆ ಆ ರಸ್ತೆಯ ಸ್ಥಿತಿ ಯಾರಿಗೂ ಬೇಡ. ಚುನಾವಣೆಯ ಸಮಯದಲ್ಲಿ ಮಾತ್ರ ನಗರಸಭೆಯಿಂದ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಬೇರೆ ದಿನ ಈ ಕಡೆ ಯಾರಿಗೂ ಗಮನವಿರುವುದಿಲ್ಲ. ಇಲ್ಲಿನ ಬೀದಿ ಕಂಬಗಳಲ್ಲಿ ಜೋತು ಬಿದ್ದ ಟ್ಯೂಬ್ಲೈಟ್‌ಗಳು ಅಪಾಯಕಾರಿಯಾಗಿದೆ. ಇನ್ನು ಇಲ್ಲಿ ಕುಡಿಯೋ ನೀರು 15 ದಿನಕ್ಕೆ ಒಮ್ಮೆ ಬರುತ್ತದೆ. ಬೋರ್ವೆಲ್ ಇದ್ದರೂ ಇಲ್ಲದಂತಾಗಿದೆ. ರಾತ್ರಿಯಾದರೆ ಹಾವು, ಚೇಳು, ಕಾಟ. ದಿನ ಬೆಳಗಾದರೆ ಡ್ರೈನೇಜ್ ಮೇಲ್ಚಾವಣಿಯ ದುರ್ನಾತ. ಇನ್ನು ಮಳೆಗಾಲದಲ್ಲಿ ಡ್ರೈನೇಜ್ ತುಂಬಿ ರೋಡಲ್ಲಿ ಹರಿದಾಡುತ್ತದೆ. ಮತ್ತು ಮಳೆಯಿಂದಾಗಿ ಮನೆಗಳ ಮೇಲ್ಚಾವಣಿ ಸೋರುತ್ತದೆ. ವಸತಿಯ ವಲಯದ ಸುತ್ತಮುತ್ತಲಿನ ಜಾಗ ಮುಳ್ಳು ಮತ್ತು ಕಟ್ಟಿಗೆಗಳಿಂದ ಕೂಡಿವೆ. ಹಾಗೆಯೇ ಮಳೆಗಾಲದಲ್ಲಿ ಕೆಸರಿನಿಂದ ಕೂಡಿರುವ ರಸ್ತೆ-ಗುಂಡಿಗಳನ್ನು ಸರಿಪಡಿಸಲು ನೌಕರರು ಹರಸಾಹಸ ಪಡುವಂತಾಗಿದೆ.
ಇನ್ನು ಮೇಲಾಧಿಕಾರಿಗಳ ಭಯದಿಂದ ಅಧಿಕಾರಿಗಳ ಸ್ವಂತ ಖರ್ಚಿನಿಂದ ದುರಸ್ತಿ ಮಾಡಿಕೊಳ್ಳವ ಪರಿಸ್ಥಿತಿ ಬಂದಿದೆ. ಪಿಡಬ್ಲ್ಯೂಡಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್ಆರ್ ಬಂಡಿವಡ್ಡರ್ ಅವರು ಮೂರು ದಿನಕ್ಕೆ ಇಲ್ಲ ಆರು ದಿನಕೊಮ್ಮೆ ಕಛೇರಿಗೆ ಬರುತ್ತಾರೆ. ಇಲ್ಲ ಸ್ಥಳ ತಪಾಸಣೆ ನೆಪ ಹೇಳಿ ಮನೆಯಲ್ಲಿ ನಿದ್ರೆ ಮಾಡುತ್ತಾರೆ. ಈ ಕೆಲಸ ಏನ್ ಮಾಡ್ತಾರೊ ಇಲ್ಲವೊ ಆದರೆ ತಿಂಗಳು ತಿಂಗಳು ಸಂಬಳ ಮತ್ತು ಗಿಂಬಳ ಎರಡನ್ನೂ ಮನೆಗೆ ಒಯ್ಯುತ್ತಾರೆ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಎಸ್ಆರ್ ಬಂಡಿವಡ್ಡರ್ ನ ದೌಜ೯ನ್ಯ ದಿಂದ ಕೆಳಗಿನ ನೌಕರರು ಸುಮಾರು ವರ್ಷಗಳಿಂದ ಯಾತನೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸುವವರು ಯಾರೂ ಇಲ್ಲದಂತಾಗಿದೆ. ಇನ್ನು ಈ ಕ್ಷೇತ್ರದ ಶಾಸಕ ಜಗದೀಶ್ ಅವರು ಗುಡಿಗುಂಡಾರ ಉದ್ಧಾರ ಮಾಡೋದೇ ಇವರ ಕಾಯಕವಾಗಿದೆ ಹೊರತು ನಮ್ಮ ಕಷ್ಟಗಳಿಗೆ ಸ್ಪಂದಿಸಲು ಸಮಯವಿಲ್ಲದಾಗಿದೆ ಎಂದು ಇಲ್ಲಿನ ನೌಕರರು ಗೋಳಾಡುತ್ತಿದ್ದಾರೆ.
Post a comment
Log in to write reviews