
ಬೆಂಗಳೂರು: ನಗರದಲ್ಲಿ ಕೆಲದಿನಗಳಿಂದ ಧಾರಕಾರ ಮಳೆಯಾಗಿದ್ದು, ಇದರಿಂದ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಇದರಿಂದ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂದು ಮಳೆ ಸ್ವಲ್ಪ ಮಳೆ ಕಡಿಮೆಯಾಗಿದ್ದು, ಬಿಸಿಲಿದೆ. ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 21 ರವರೆಗೆ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಅಕ್ಟೋಬರ್ 21ರಿಂದ ಮಳೆ ಶುರುವಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು, ವಿಜಯನಗರ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕುಂದಾಪುರ, ಶೋರಾಪುರ, ನರಗುಂದ, ನಾಯಕನಹಟ್ಟಿ, ಯಲ್ಲಾಪುರ, ನಂಜನಗೂಡು, ಕದ್ರಾ, ಮಂಕಿ, ಗಬ್ಬೂರು, ಬೈಲಹೊಂಗಲ, ಹಿರೇಕೆರೂರು, ಹುಣಸೂರು, ಶಿರಾಲಿ, ಕಿರವತ್ತಿ, ಶಿಗ್ಗಾಂವ್, ಮಂಕಿ, ಗೋಕರ್ಣ, ಬಾದಾಮಿಯಲ್ಲಿ ಮಳೆಯಾಗಿದೆ.
ಬೆಳಗಾವಿ, ಅಂಕೋಲಾ, ಕಾರವಾರ, ಮುದ್ದೇಬಿಹಾಳ, ರಾಯಚೂರು, ಸೇಡಂ, ಹೊನ್ನಾವರ, ಕುಷ್ಟಗಿ, ಖಜೂರಿ, ಧಾರವಾಡ, ಸೈದಾಪುರ, ಕುಂದಗೋಳ, ಗೇರುಸೊಪ್ಪ, ಮುದಗಲ್, ಲೋಕಾಪುರ, ಭದ್ರಾವತಿ, ಕಡೂರು, ಕೋಟ, ಆಲಮಟ್ಟಿ, ಕುಮಟಾ, ಹಳಿಯಾಳ, ಧರ್ಮಸ್ಥಳ, ಚಿಕ್ಕೋಡಿ, ಗೋಕಾಕ್, ಜೇವರ್ಗಿ, ಮಧುಗಿರಿ, ಲಿಂಗನಮಕ್ಕಿ, ಕುಡತಿನಿ, ಹೊಸದುರ್ಗ, ದೊಡ್ಡಬಳ್ಳಾಪುರ, ಚಿಕ್ಕಮಗಳೂರು, ಬೆಳ್ಳೂರು, ತ್ಯಾಗರ್ತಿಯಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಶುಭ್ರ ಆಕಾಶವಿದೆ, ಎಚ್ಎಎಲ್ನಲ್ಲಿ 22.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 22.1ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 24.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 24.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
Poll (Public Option)

Post a comment
Log in to write reviews