
ಇಸ್ರೇಲ್ ಲೆಬನಾನ್ ಮೇಲೆ ಇಂದು ಮತ್ತೆ ದಾಳಿ ಮಾಡಿದ್ದು, ಉಗ್ರ ಸಂಘಟನೆಗೆ ಹಿಜ್ಬುಲ್ಲಾಕ್ಕೆ ಮತ್ತೊಮ್ಮೆ ಎಚ್ಚರಿಕೆಯನ್ನು ಕೊಟ್ಟಿದೆ. ಲೆಬನಾನ್ ರಾಜಧಾನಿಯ ಒಂದು ಭಾಗವಾಗಿರುವ ಬೈರುತ್ನ ಮೇಲೆ ಇಸ್ರೇಲ್ ತೀವ್ರವಾದ ದಾಳಿಯನ್ನು ನಡೆಸಿದೆ. ಬೈರುತ್ ಪ್ರದೇಶ ಹೊಗೆಯಿಂದ ತುಂಬಿಕೊಂಡಿದೆ.ಈ ದಾಳಿಯಿಂದ ಅನೇಕ ಸಾವು ನೋವುಗಳು ಉಂಟಾಗಿದೆ.
ಇಸ್ರೇಲ್ ಲೆಬನಾನ್‌ನ ರಾಜಧಾನಿಯ ಹೃದಯಭಾಗವಾದ ಬೈರುತ್ ಮೇಲೆ ನೆನ್ನೆ ರಾತ್ರಿಯಿಂದ ದಾಳಿ ಮಾಡಲು ಶುರು ಮಾಡಿದ್ದು, ಲೆಬನಾನ್‌ನ ದಕ್ಷಿಣ ಬೈರುತ್‌ನಲ್ಲಿರುವ ಹಿಜ್ಬುಲ್ಲಾದ ಪ್ರಮುಖ ಭದ್ರಕೋಟೆಗಳ ಮೇಲೆ ವೈಮಾನಿಕ ದಾಳಿಯನ್ನು ಇಸ್ರೇಲ್ ನಡೆಸಿದೆ. ಈ ದಾಳಿಯಿಂದ ಜನನಿಬಿಡ ನಾಗರಿಕ ಪ್ರದೇಶಗಳಲ್ಲಿ ಭಯ ವಾತವರಣ ಸೃಷ್ಟಿಯಾಗಿದ್ದು, ಇದೀಗ ಇಸ್ರೇಲ್ ಪಡೆಗಳು ಗಾಜಾದಿಂದ ಲೆಬನಾನ್ನತ್ತ ಮುಖ ಮಾಡಿದೆ ಎಂದು ಹೇಳಲಾಗಿದೆ.
ಈ ದಾಳಿಯಿಂದ ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನು ಇಸ್ರೇಲ್ ಪ್ರಮುಖ ಗುರಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾಹ್ ಎಂದು ಹೇಳಲಾಗಿದೆ. ದಕ್ಷಿಣ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾದ ಕ್ಷಿಪಣಿ ಘಟಕದ ಕಮಾಂಡರ್ ಮುಹಮ್ಮದ್ ಅಲಿ ಇಸ್ಮಾಯಿಲ್ ಇರಾನ್ ಬೆಂಬಲಿತ ಸೇನಾಪಡೆಯ ಇತರ ಹಿರಿಯ ಅಧಿಕಾರಿಗಳ ಮೇಲೆ ಏರ್ ಸ್ಟ್ರೈಕ್ ದಾಳಿಗಳನ್ನು ಮಾಡಿ ಅವರ ಹತ್ಯೆಗೆ ಕಾರಣವಾಗಿದೆ.
ಇಸ್ರೇಲ್ ಇಂದು ದಕ್ಷಿಣ ಬೈರುತ್‌ನಲ್ಲಿನ ಕಟ್ಟಡಗಳಲ್ಲಿ ಸಂಗ್ರಹವಾಗಿರುವ ಹೆಜ್ಬೊಲ್ಲಾಹ್‌ನ ಶಸ್ತ್ರಾಸ್ತ್ರ ಡಿಪೋಗಳ ಮೇಲೆ ದಾಳಿಯನ್ನು ಮಾಡಿ ನೆಲಸಮಗೊಳಿಸಿದೆ. ಇದರಿಂದ ಆರು ಕಟ್ಟಡಗಳನ್ನು ನೆಲಸಮವಾಗಿದ್ದು, 91 ಜನರು ಗಾಯಗೊಂಡಿದ್ದಾರೆ ಮತ್ತು ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹೆಜ್ಬೊಲ್ಲಾಹ್ ಉಗ್ರರರು ಕೂಡ ಪ್ರತಿದಾಳಿಯನ್ನು ನಡೆಸಿದ್ದಾರೆ. ಆದರೆ ಇಸ್ರೇಲ್ ದಾಳಿಗೆ ಹೆಜ್ಬೊಲ್ಲಾಹ್ ಸಂಘಟನೆ ಕಂಗೆಟ್ಟಿದೆ.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಉತ್ತರದ ಗಡಿಯನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸುವವರೆಗೆ ಇಸ್ರೇಲ್ ಹೆಜ್ಬೊಲ್ಲಾ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರೆಸುತ್ತದೆ ಎಂದು ಪ್ರತಿಜ್ಞೆ ಮಾಡಿದರು. ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಹೆಜ್ಬೊಲ್ಲಾಗೆ ಯಾವುದೇ ವಿರಾಮ ನೀಡುವುದಿಲ್ಲ ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶುಕ್ರವಾರ ಮಾತನಾಡಿದ್ದಾರೆ.
Poll (Public Option)

Post a comment
Log in to write reviews