ಟಾಪ್ 10 ನ್ಯೂಸ್
ಶ್ರೀ ಇಕ್ಬಾಲ್ ಅಹ್ಮದ್ ಸರಡಿಗಿ ಅವರ ನಿಧನಕ್ಕೆ ಈಶ್ವರ್ ಬಿ ಖಂಡ್ರೆ ಸಂತಾಪ
ಕಲ್ಬುರ್ಗಿ: ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯರು ಕಾಂಗ್ರೆಸಿನ ಹಿರಿಯ ಮುಖಂಡರು ಆಗಿದ್ದ 80 ವರ್ಷದ ಶ್ರೀ ಇಕ್ಬಾಲ್ ಅಹ್ಮದ್ ಸರಡಗಿ ಅವರ ನಿಧನಕ್ಕೆ ಅರಣ್ಯ, ಜೀವಸತ್ವ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಶ್ರಮಿಸಿದ ಶ್ರೀ ಸರಡಗಿ ಅವರ ಸಾವಿನ ಸುದ್ದಿ ತಿಳಿದು ದುಃಖವಾಗಿದೆ ಎಂದು ತಿಳಿಸಿದ್ದಾರೆ. ಸಂಸತ್ ಸದಸ್ಯರಾಗಿ, ಒಂದು ಬಾರಿ ವಿಧಾನ ಪರಿಷತ್ತು ಸದಸ್ಯರಾಗಿ ನಾಡಿಗೆ ನೀಡಿರುವ ಕೊಡುಗೆ ಸ್ಮರಣಾರ್ಹವಾದದ್ದು. ಕುಟುಂಬದವರಿಗೂ ಹಾಗೂ ಬಂಧು-ಮಿತ್ರರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ, ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
Post a comment
Log in to write reviews