ರಾಜಕೀಯ
ಬಿಜೆಪಿ ಕಾಲದಲ್ಲಿ ನಿಗಮ-ಮಂಡಳಿಗಳಲ್ಲಿ ಅಕ್ರಮಗಳು ನಡೆದಿವೆ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಬಿಜೆಪಿ ಕಾಲದಲ್ಲಿ ತುಂಬಾ ಅಧ್ವಾನ ಮಾಡಿದ್ದಾರೆ. ನಿಗಮ-ಮಂಡಳಿಗಳಲ್ಲಿ ಅಕ್ರಮಗಳು ನಡೆದಿವೆ. ಹೀಗಾಗಿಯೇ 250 ಕೋಟಿ ಹಣವನ್ನು ಇಲಾಖೆ ವಾಪಸ್ ಪಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಕೆಲವು ಆಫೀಸರ್ಗಳು ಖದೀಮರಿದ್ದಾರೆ. 300-400 ಕೋಟಿ ತಿಂದವರು ಇನ್ನೂ ಇದ್ದಾರೆ. ಅವರ ಕಾಲದಲ್ಲಿದ್ದವರನ್ನೆಲ್ಲಾ ಬದಲಾವಣೆ ಮಾಡ್ಬೇಕು ಎಂದು ತಿಳಿಸಿದ್ದಾರೆ. ಇನ್ನು ಕ್ಲರ್ಕ್ಗಳನ್ನೂ ಸೂಪರಿಂಟೆಂಡೆಂಟ್, MD ಮಾಡಿದ್ದಾರೆ. EDಗೆ ನಮ್ಮ ಹೆಸರು ಹೇಳಬೇಡಿ ಅಂದೋರು ಯಾರು. ಹೇಳಲಿ ಬಿಡಿ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
Poll (Public Option)

Post a comment
Log in to write reviews