
ಬೆಳಗಾವಿ: ಇರಾನಿ ಗ್ಯಾಂಗ್ ಬೆಳಕಿಗೆ ಬಂದಿದ್ದು ಬೆಳಗಾವಿ ಜನರ ನೆಮ್ಮದಿ ಹಾಗು ನಿದ್ದೆಗೆ ಭಂಗ ತಂದಿದೆ. ಇರಾನಿ ಗ್ಯಾಂಗ್‌ನಿಂದ (Irani gang) ಮಹಿಳೆಯರು ಧೈರ್ಯದಿಂದ ಬೀದಿಯಲ್ಲಿ ಓಡಾಡದ ಪರಿಸ್ಥಿತಿ ಎದುರಾಗಿದೆ. ಬೀದಿಯಲ್ಲಿ ಸಂಚರಿಸುವ ಒಂಟಿ ಮಹಿಳೆಯರು ಹಾಗೂ ಖಾಲಿ ಮನೆಗಳೆ ಈ ಗ್ಯಾಂಗ್‌ನ (Theft Case) ಟಾರ್ಗೆಟ್ ಆಗಿದೆ.
ರಾತ್ರಿ ಹೊತ್ತು ಮನೆಗಳ ಮುಂಭಾಗ ಬೀಗ ಹಾಕಿದ್ದರೆ, ಹಗಲು ಹೊತ್ತು ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಾರೆ. ಮಹಾಂತೇಶ ನಗರ, ಅಮನ್ ನಗರದಲ್ಲಿ ಸೇರಿದಂತೆ ವಿವಿಧೆಡೆ ಮನೆಗಳ್ಳತನ ಮಾಡಿದ್ದಾರೆ. 2.5 ಲಕ್ಷ ರೂ. ಚಿನ್ನಾಭರಣ, 50 ಸಾವಿರ ಮೌಲ್ಯದ ಬೆಳ್ಳಿ ಹಾಗೂ 2.20 ಲಕ್ಷ ನಗದು ಸೇರಿ 7 ಲಕ್ಷ ಮೌಲ್ಯದ ವಸ್ತು ಎಗರಿಸಿ ಖದೀಮರು ಕಾಲ್ಕಿತ್ತಿದ್ದಾರೆ. ಜೊತೆಗೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕ್ ಕದ್ದು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Poll (Public Option)

Post a comment
Log in to write reviews