IPS ಬೆನ್ನಲ್ಲೇ IASಗೆ ಮೇಜರ್ ಸರ್ಜರಿ 21 IAS ಅಧಿಕಾರಿಗಳ ವರ್ಗಾವಣೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕ ರಾಜ್ಯ ಸರ್ಕಾರ ಆಡಳಿತ ವರ್ಗದಲ್ಲಿ ಮೇಜರ್ ಸರ್ಜರಿ ಮಾಡುತ್ತಿದೆ. ಇತ್ತೀಚಿಗೆ ಸರ್ಕಾರ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಇದೀಗ ಕರ್ನಾಟಕ ಸರ್ಕಾರ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನೂತನ ಜಾಗಗಳಿಗೆ ಕೂಡಲೇ ರಿಪೋರ್ಟ್ ಮಾಡಿಕೊಳ್ಳುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸಹಾಯಕ ಕಾರ್ಯದರ್ಶಿ ಯುಕೇಶ್ ಕುಮಾರ್ ಎಸ್. ನಿರ್ದೇಶಿಸಿದ್ದಾರೆ.
IAS ಅಧಿಕಾರಿಗಳ ವರ್ಗಾವಣೆ ಪಟ್ಟಿ:
1) ಮೈಸೂರು ಡಿಸಿ ಕೆ.ವಿ.ರಾಜೇಂದ್ರ - (ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿ)
2) ವಿ.ರಾಮ್ ಪ್ರಸಾತ್ ಮನೋಹರ್ - (ನಗರಾಭಿವೃದ್ಧಿ ಹೆಚ್ಚುವರಿ ಕಾರ್ಯದರ್ಶಿಯಾಗಿ)
3) ಬೆಳಗಾವಿ ಡಿಸಿ ನಿತೇಶ್ ಪಾಟೀಲ್ - (ಸಣ್ಣ ಮಧ್ಯಮ ಕೈಗಾರಿಕಾ ಇಲಾಖೆ ನಿರ್ದೇಶಕ)
4) ಡಾ.ಅರುಂದತಿ ಚಂದ್ರಶೇಖರ್ - (ಪಂಚಾಯತ್ ರಾಜ್ ಕಮಿಷನರ್)
5) ಜ್ಯೋತಿ ಕೆ - (ಜವಳಿ ಅಭಿವೃದ್ಧಿ ನಿರ್ದೇಶಕರಾಗಿ)
6) ಸಿ.ಎನ್ ಶ್ರೀಧರ - (ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರಾಗಿ)
7) ಲಕ್ಷ್ಮೀಕಾಂತ ರೆಡ್ಡಿ - (ಮೈಸೂರು ಜಿಲ್ಲಾಧಿಕಾರಿ)
8) ರಾಯಚೂರು ಡಿಸಿ ಚಂದ್ರಶೇಖರ್ - (ನಾಯಕ್ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ)
9) ವಿಜಯಮಾಂತೇಶ್ ಹಾವೇರಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ
10) ಬೀದರ್ ಡಿಸಿ ಗೋವಿಂದ ರೆಡ್ಡಿ - (ಗದಗ ಡಿಸಿ)
11) ಹಾವೇರಿ ಡಿಸಿ ರಘುನಂದನ್ - (ಖಜಾನೆ ಆಯುಕ್ತರಾಗಿ)
12) ಡಾ.ಗಂಗಾಧರಸ್ವಾಮಿ - (ದಾವಣಗೆರೆ ಡಿಸಿ)
13) ನಿತೀಶ್ ಕೆ - (ರಾಯಚೂರು ಡಿಸಿ)
14) ಮೊಹ್ಮದ್ ರೋಷನ್ - (ಬೆಳಗಾವಿ ಡಿಸಿ)
15) ಶಿಲ್ಪಾ ಶರ್ಮಾ - (ಬೀದರ್ ಡಿಸಿ)
16) ದಿಲೇಶ್ ಸಸಿ - (ಇ-ಗವರ್ನೆನ್ಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ)
17) ಲೋಕಂಡೆ ಸ್ನೇಹಾಲ್ ಸುಧಾಕರ್ - (ಕರ್ನಾಟಕ ವಿದ್ಯುತ್ ಕಾರ್ಖಾನೆ ಎಂಡಿ)
18) ಶ್ರೀರೂಪಾ - (ಪಶುಸಂಗೋಪನಾ ಇಲಾಖೆ ಕಮಿಷನರ್)
19) ಜಿ.ಎಂ.ವಿಠಲರಾವ್ - (ಬಾಗಲಕೋಟೆ ಪುನರ್ವಸತಿ ಕೇಂದ್ರದ ಜಿಎಂ)
20) ಹೇಮಂತ್ ಎನ್ - (ಶಿವಮೊಗ್ಗ ಜಿಪಂ ಸಿಇಒ)
21) ಮಹ್ಮದ್ ಅಲಿ ಅಕ್ರಂ ಶಾ - (ವಿಜಯನಗರ ಜಿಪಂ ಸಿಇಒ).
Poll (Public Option)

Post a comment
Log in to write reviews