IPL 2025: BCCI ಹೊಸ ನಿಯಮ ಪ್ರಕಟಿಸುತ್ತಿದ್ದಂತೆ ಸ್ಟಾರ್ ಆಟಗಾರನ ರಿಜೆಟ್ಕ್ ಮಾಡಿದ RCB
2025ರ IPL ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. BCCI ತನ್ನ ರಿಟೆನ್ಷನ್ ನಿಯಮಗಳನ್ನು ಪ್ರಕಟ ಮಾಡಿದೆ. ಬಿಸಿಸಿಐ ಕಳೆದ ಸೀಸನ್ಗಿಂತಲೂ ಭಿನ್ನವಾಗಿ ಈ ಬಾರಿ ಐಪಿಎಲ್ ನಿಯಮಗಳನ್ನು ರೂಪಿಸಿದೆ. ಆರ್ಟಿಎಂ ಕಾರ್ಡ್ (RTM) ಬಳಕೆ ನಿಯಮ ಮತ್ತೆ ಜಾರಿ ಮಾಡಲಾಗಿದೆ. 5 ವರ್ಷಗಳ ಕಾಲ ನಿವೃತ್ತಿ ಘೋಷಿಸಿದ ಆಟಗಾರನನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.
ಹೊಸ ರಿಟೈನ್ ನಿಯಮದ ಪ್ರಕಾರ ಪ್ರತಿ ಐಪಿಎಲ್ ತಂಡಕ್ಕೆ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಿಟೈನ್ ಮೂಲಕ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಆಟಗಾರರು ಮುಂದಿನ ವರ್ಷಗಳ ಕಾಲ ಆಡಲಿದ್ದಾರೆ. ಇದರ ಮಧ್ಯೆ ಆರ್ಸಿಬಿ ತಂಡದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
ಸ್ಟಾರ್ ಆಟಗಾರನನ್ನು ರಿಜೆಟ್ಕ್ ಮಾಡಿದ RCB
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್‌ಗೆ 40 ವರ್ಷವಾಗಿದ್ದು, ಇನ್ನೂ ಮೂರು ಸೀಸನ್ ಆಡೋದು ಡೌಟ್ ಆಗಿದೆ. ಹಾಗಾಗಿ ಆರ್ಸಿಬಿ ಹೊಸ ಕ್ಯಾಪ್ಟನ್ಗಾಗಿ ಹುಡುಕಾಟ ನಡೆಸುತ್ತಿದೆ. ಈ ಹೊತ್ತಲ್ಲೇ ರಿಷಬ್ ಪಂತ್ ತಮ್ಮ ಮ್ಯಾನೇಜರ್ ಮೂಲಕ ಆರ್ಸಿಬಿ ಫ್ರಾಂಚೈಸಿಯನ್ನು ಸಂಪರ್ಕಿಸಿ ತಂಡಕ್ಕೆ ಸೇರಲು ಬಯಸಿದ್ದರು ಎನ್ನಲಾಗಿದೆ. ಆದರೆ ಆರ್ಸಿಬಿ ನಿರಾಕರಣೆ ಮಾಡಿದೆ. ಆರ್ಸಿಬಿಗೆ ಪಂತ್ ಬರುವುದು ವಿರಾಟ್ಗೆ ಇಷ್ಟವಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಗರಂ ಆಗಿ ಪ್ರತಿಕ್ರಿಯೆ ನೀಡಿರೋ ಡೆಲ್ಲಿ ಕ್ಯಾಪ್ಟನ್ ಪಂತ್, ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಫೇಕ್ ನ್ಯೂಸ್ ಶೇರ್ ಮಾಡುತ್ತೀರಾ? ಫೇಕ್ ನ್ಯೂಸ್ನಿಂದ ಬೇರೆ ವಾತಾವರಣ ಸೃಷ್ಟಿ ಮಾಡಬೇಡಿ. ಇದೇ ಫಸ್ಟ್, ಇದೇ ಲಾಸ್ಟ್. ಈ ರೀತಿ ಮತ್ತೊಮ್ಮೆ ಫೇಕ್ ನ್ಯೂಸ್ ಹರಿಬಿಡಬಾರದು ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
Post a comment
Log in to write reviews