ಟಾಪ್ 10 ನ್ಯೂಸ್
ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಚಾಮರಾಜನಗರದ ವರ್ಷಗೆ ಆಹ್ವಾನ! ಯಾರು ಈ ವರ್ಷ?

ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗ್ರಾಮೀಣ ಭಾಗದ ಪ್ರಗತಿಪರ ರೈತ ಮಹಿಳೆ ವರ್ಷಗೆ ಆಹ್ವಾನ ಬಂದಿದೆ. ಈ ಕುರಿತು ಸಂತಸ ಹಂಚಿಕೊಂಡಿರುವ ವರ್ಷ, "ನಮ್ಮಂತ ಕೆಳ ಹಂತದ ರೈತರನ್ನು ಗುರುತಿಸಿ, ದೇಶದ ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನಿಸಿರುವುದು ನಿಜಕ್ಕೂ ಅತಿ ಹೆಚ್ಚು ಸಂತೋಷವನ್ನ ನೀಡುತ್ತಿದೆ" ಎಂದಿದ್ದಾರೆ.
ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಪ್ರಗತಿಪರ ರೈತರಾದ ವರ್ಷ, ಮೋದಿ ರವರ "ಮನ್ ಕಿ ಬಾತ್" ಕಾರ್ಯಕ್ರಮದ ಮೂಲಕ ಪಿಎಂ ಆತ್ಮ ನಿರ್ಭಾರ ಯೋಜನೆಯ ಪ್ರೇರಪಣೆಗೊಂಡು ಬಾಳೆಮರದಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಸ್ವಾವಲಂಭಿ ಬದುಕು ಕಟ್ಟಿಕೊಂಡಿದ್ದರು. ಈ ಹಿಂದೆ ನವಂಬರ್ ಮನ್ ಕಿ ಬಾತ್ ಸಂಚಿಕೆಯಲ್ಲಿ ವರ್ಷರವರ ಸಾಧನೆಯನ್ನು ಮೋದಿಯವರು ಗುರುತಿಸಿ ಮೆಚ್ಚುಗೆ ಪಾತ್ರರಾಗಿದ್ದರು.
Poll (Public Option)

Post a comment
Log in to write reviews