2024-12-24 06:49:32

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ನಾವು ಅಧಿಕಾರಕ್ಕೆ ಬಂದರೆ ಅದಾನಿ ಮೇಲೆ ತನಿಖೆ : ರಾಹುಲ್ ಗಾಂಧಿ

ನವದೆಹಲಿ: ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ಅಸ್ಥಿತ್ವಕ್ಕೆ ಬಂದರೆ ಉದ್ಯಮಿ ಅದಾನಿ ಸಮೂಹ 2014 ರಲ್ಲಿ ಇಂಡೋನೇಷ್ಯಾದಿಂದ ಕಡಿಮೆ ಗುಣಮಟ್ಟದ ಕಲ್ಲಿದ್ದಲು ಖರೀದಿಸಿ ಭಾರತದಲ್ಲಿ ಮೂರು ಪಟ್ಟು ಬೆಲೆಗೆ ಮಾರಾಟ ಮಾಡಿದ್ದಾರೆ ಎನ್ನಲಾದ ಪ್ರಕರಣವನ್ನು ಸಂಸತ್ತಿನ ಜಂಟಿ ಸ್ಥಾಯಿ ಸಮಿತಿ ಮೂಲಕ ತನಿಖೆ ನಡೆಸುವುದಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಗೌತಮ್ ಅದಾನಿ ಕಳಪೆ ಕಲ್ಲಿದ್ದಲು ಖರೀದಿ ಮಾಡಿ ಅದನ್ನು ಭಾರತದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ ಎನ್ನುವ ಲಂಡನ್‌ನ ಫೈನಾನ್ಸಿಯಲ್ ಟೈಮ್ಸ್‌ನಲ್ಲಿ ವರದಿ ಪ್ರಸ್ತಾಪಿಸಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ ಅವರು “ಬಿಜೆಪಿ ಸರ್ಕಾರದಲ್ಲಿ ದೊಡ್ಡ ಕಲ್ಲಿದ್ದಲು ಹಗರಣ ಬೆಳಕಿಗೆ ಬಂದಿದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಹಗರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತ ಅದಾನಿ ಮೂರು ಕಡಿಮೆ ದರ್ಜೆಯ ಕಲ್ಲಿದ್ದಲು ಮಾರಾಟ ಮಾಡಿದ್ದಾರೆ ಎಂದು ದೂರಿದ್ದಾರೆ. ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಮಾಡಿದರೆ ಈ ಹಗರಣವನ್ನು ಜೆಪಿಸಿ ಮೂಲಕ ತನಿಖೆ ನಡೆಸಲು ಸಮಿತಿ ರಚಿಸುವದಾಗಿ ಅವರು ತಿಳಿಸಿದ್ದಾರೆ

ಅದಾನಿ ಕಡಿಮೆ ದರ್ಜೆಯ ಕಲ್ಲಿದ್ದಲನ್ನು ಮೂರು ಪಟ್ಟು ಬೆಲೆಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಭ್ರಷ್ಟಾಚಾರ” ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಮೌನ ವಹಿಸಿರುವುದುನ್ನು ಇದೇ ವೇಳೆ ಪ್ರಶ್ನಿಸಿದ್ದಾರೆ. 
ಕಳೆದ ದಶಕದಲ್ಲಿ ಪ್ರಧಾನಿಯವರ ಆಪ್ತರು ಕಾನೂನನ್ನು ಉಲ್ಲಂಘಿಸುವ ಮೂಲಕ ಮತ್ತು ಅತ್ಯಂತ ದುರ್ಬಲ ಭಾರತೀಯರನ್ನು ಶೋಷಿಸುವ ಮೂಲಕ ತಮ್ಮನ್ನು ತಾವು ಶ್ರೀಮಂತಗೊಳಿಸಿರುವ ನಿರ್ಭಯಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ ಎಂದರು.

ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿರುವ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯ ತನಿಖೆಯು 2014ರಲ್ಲಿ ಇಂಡೋನೇಷ್ಯಾದಿಂದ ಅದಾನಿ ಅಗ್ಗವಾಗಿ ಖರೀದಿಸಿದ ಕಡಿಮೆಗುಣಮಟ್ಟದ, ಹೆಚ್ಚಿನ ಬೂದಿ ಕಲ್ಲಿದ್ದಲಿನ ಹತ್ತಾರು ಸಾಗಣೆಯನ್ನು ಮೂರು ಬಾರಿ ಮೋಸದಿಂದ ಮಾರಾಟ ಮಾಡಲಾಗಿದೆ ಎನ್ನುವ ಸಂಗತಿ ಬಯಲು ಮಾಡಿದೆ. ಸಾರ್ವಜನಿಕ ವಲಯದ ತಮಿಳುನಾಡು ಉತ್ಪಾದನೆ ಮತ್ತು ವಿತರಣಾ ನಿಗಮಕ್ಕೆ ಉತ್ತಮ ಗುಣಮಟ್ಟದ, ಕಡಿಮೆ ಬೂದಿ ಕಲ್ಲಿದ್ದಲು ಇದರಿಂದ 3,000 ಕೋಟಿ ರೂ.ಗಳಷ್ಟು ಹೆಚ್ಚುವರಿ ಲಾಭಗಳಿಸಿದ್ದಾರೆ ಆದರೆ ಸಾಮಾನ್ಯ ಜನರು ಅಧಿಕ ಬೆಲೆಯ ವಿದ್ಯುತ್ ಮತ್ತು ಎತ್ತರದ ವಾಯುಮಾಲಿನ್ಯ ಅನುಭವಿಸುವಂತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Post a comment

No Reviews