
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರವನ್ನು ಚಂದ್ರ ಬಾಬು ನಾಯ್ಡು ಅವರ ಪಾದಕ್ಕೆ ನಮಸ್ಕಾರ ಮಾಡುವ ರೀತಿ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಆರೋಪದಲ್ಲಿ ಮೈಬೂಬ್ ಸಾಬ್ ಎಂಬಾತನ್ನು ಬಾದಾಮಿ ಪೊಲೀಸ್ ಬಂಧಿಸಿದ್ದಾರೆ.
ಆರೋಪಿ ಮೈಬೂಬ್ ಸಾಬ್ ವಾಹನ ಚಾಲಕನಾಗಿದ್ದೂ, ಈ ಸಂಘಟನೆಯ ಮುಖಂಡನಾಗಿದ್ದ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಾರದ ಹಿನ್ನಲೆ ಬಿಜೆಪಿ ಎನ್‌ಡಿಎ ಮೈತ್ರಿ ಸರ್ಕಾರ ರಚಿಸಲು ಮುಂದಾಗಿದೆ. ಈ ಹಿನ್ನಲೆ ಮೈಬೂಬ್ ಸಾಬ್ ಪ್ರಧಾನಿ ನರೇಂದ್ರ ಮೋದಿ ಅವರ ಭಾವ ಚಿತ್ರ ಚಂದ್ರ ಬಾಬು ನಾಯ್ಡು ಅವರ ಪಾದಕ್ಕೆ ನಮಸ್ಕಾರ ಮಾಡುವ ರೀತಿ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ ಹಲವು ಅಕ್ರಮ ದಂದೆಯಲ್ಲಿಯೂ ಈತ ಭಾಗಿಯಾಗಿದ್ದ ಎಂದು ಹೇಳಲಾಗುತ್ತಿದೆ, ಗದಗ ಜಿಲ್ಲೆಯ ರೋಣ ತಾಲೂಕಿನ ಹದ್ಲಿ ಗ್ರಾಮದಲ್ಲಿ ಕೋಟಾ ನೋಟ್ ದಂಧೆಯಲ್ಲಿ 50,000 ಸಾವಿರ ಕೊಟ್ರೆ 5,00,000 ಕೊಡುವುದಾಗಿ ಆಪರ್ ನೀಡುತ್ತಿದ್ದ. ಸದ್ಯ ಈತನನ್ನು ಬಾದಾಮಿ ಪೊಲೀಸರು ಬಂಧಿಸಿ ಸಿ,ಆರ್,ಪಿ,ಸಿ 108 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Poll (Public Option)

Post a comment
Log in to write reviews