
ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಹಿಂದಿ ಬೋರ್ಡ್ ಹಾಕಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಎಂಟಿಸಿಗೆ ಹಿಂದಿ ಮೇಲಿನ ಪ್ರೇಮ ಹೆಚ್ಚಾಗಿದ್ಯಾ? ಈ ಹಿಂದಿ ಭಾಷೆ ಬೋರ್ಡ್ ಹಿಂದಿರುವ ವಿಜ್ಞಾನಿ ಯಾರು ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಿಎಂಟಿಸಿಯನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿರುವ ನೆಟ್ಟಿಗರು, ಹಿಂದಿ ಹೇರಿಕೆ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ಎಕ್ಸ್ ಖಾತೆಯಲ್ಲಿ ವೈರಲ್ ಆಗಿರುವ ವಿಡಿಯೊ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ವಿಡಿಯೊ ರಿ ಪೋಸ್ಟ್ ಮಾಡಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಬಗ್ಗೆ ಹಾಲಸ್ವಾಮಿ ಡಿ.ಎಂ. ಎಂಬುವವರು ಎಕ್ಸ್ ವೇದಿಕೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ಬನಶಂಕರಿ ಬಸ್ ನಿಲ್ದಾಣದ ಬಳಿ ಎಲ್‌ಕ್ಟ್ರಿಕ್ ಬಸ್ ಮೇಲೆ ಹಿಂದಿ ಬೋರ್ಡ್ ನೋಡಿದೆ. ಈ ಹಿಂದಿ ಭಾಷೆ ಬಳಕೆಯ ಹಿಂದಿನ ವಿಜ್ಞಾನಿ ಯಾರು ಎಂಬುವುದು ನನಗೆ ತಿಳಿಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆಗೆ ಹಲವು ವರ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ. ಇದೀಗ ಬಿಎಂಟಿಸಿಯಲ್ಲಿ ಹಿಂದಿ ಬಳಕೆ ಮಾಡಿರುವುದಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
Poll (Public Option)

Post a comment
Log in to write reviews