
ಲಂಡನ್‌ನಲ್ಲಿ ಭಾರತೀಯ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಮೃತ ಮಹಿಳೆ 66 ವರ್ಷದ ಅನಿತಾ ಮುಖಿ ಎಂದು ತಿಳಿದು ಬಂದಿದೆ. ಅನಿತಾ ಮುಖಿ ಲಂಡನ್‌ನ ಎಡ್ಗ್‌ವೇರ್ ಪ್ರದೇಶದ ಬ್ರಂಟ್ ಓಕ್ ಬ್ರಾಡ್‌ವೇ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ, 22 ವರ್ಷದ ಜಲಾಲ್ ಡೆಬೆಲ್ಲಾ ಎಂಬ ಆರೋಪಿ ದಿಢೀರನೆ ಬಂದು ಆಕೆಯ ಎದೆ ಮತ್ತು ಕುತ್ತಿಗೆಗೆ ಇರಿದು ಕೊಂದಿದ್ದಾನೆ.
ಮಹಿಳೆಯು ವೈದ್ಯಕೀಯ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಆರೋಗ್ಯ ಸೇವೆ (NHS) ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ನಡೆದ ಕೂಡಲೇ ಮಹಿಳೆಯನ್ನು ಆಂಬುಲೆನ್ಸ್ ನಿಂದ ಆಸ್ಪತ್ರೆಗೆ ದೌಡಾಯಿಸಿ ತುರ್ತು ಚಿಕಿತ್ಸೆ ನೀಡಿದರು. ಆದರೆ ಪರಿಸ್ಥಿತಿ ಕೈಮೀರಿದ್ದರಿಂದ ಮಹಿಳೆ ಸಾವನ್ನಪ್ಪಿದರು.
ಮಹಿಳೆಯು ಹತ್ಯೆಯಾಗುವ ಸಮಯದಲ್ಲಿ ಕಿರುಚುತ್ತಾ ಕೊಲೆಗಾರನನ್ನು ಬೇಡಿಕೊಂಡರು. ಮತ್ತು ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಸಾರ್ವಜನಿಕರಲ್ಲಿ ಭಯದ ಭೀತಿ ಸೃಷ್ಟಿಯಾಗಿದೆ ಎಂದು ವರದಿಗಳು ತಿಳಿಸಿವೆ.
Poll (Public Option)

Post a comment
Log in to write reviews