
ನ್ಯೂಯಾರ್ಕ್: ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಭರ್ಜರಿ ಜಯಭೇರಿ ದಾಖಲಿಸಿದೆ.
ನ್ಯೂಯಾರ್ಕ್ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಜೂನ್ 9) ರಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 19 ಓವರ್ ಗಳಲ್ಲಿ10 ವಿಕೆಟ್ ಗಳ ನಷ್ಟಕ್ಕೆ ಕನಿಷ್ಟ 119 ರನ್ ಗಳ ಗುರಿ ನೀಡಿತ್ತು. ಭಾರತದ ರಿಷಬ್ ಪಂಥ್ 42 ರನ್, ಅಕ್ಷರ್ ಪಟೇಲ್ 20 ರನ್ ಹಾಗೂ ರೋಹಿತ್ ಶರ್ಮಾ 13 ರನ್ ಗಳಿಸಿದ್ದು ಬಿಟ್ಟರೆ ಇನ್ನುಳಿದ ಆಟಗಾರ ಹೆಚ್ಚಿನ ವೈಯಕ್ತಿಕ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು. ಈ ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 20 ಓವರ್ ಗಳಲ್ಲಿ113 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ತಂಡ ಪಾಕ್ ವಿರುದ್ದ 6 ರನ್‌ಗಳ ರೋಚಕ ಜಯ ಸಾಧಿಸಿತು. ಭಾರತ ತಂಡದ ಬೂಮ್ರ 4 ಓವರ್‌ಗೆ 3 ವಿಕೆಟ್ ಕಬಳಿಸುವ ಮೂಲಕ ಪಂದ್ಯ ಶ್ರೇಷ್ಟರಾಗಿ ಆಯ್ಕೆಯಾದರು.
Poll (Public Option)

Post a comment
Log in to write reviews