2024-12-24 07:10:57

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

2027ಕ್ಕೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ

ಬೆಂಗಳೂರು : ಭಾರತದ ಆರ್ಥಿಕತೆಯ (Indian Economy ) ಬೆಳವಣಿಗೆಯೂ ನಿರೀಕ್ಷೆಯನ್ನೂ ಮೀರುತ್ತಿದೆ. 2027 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆಯಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಡಾ.ಗೀತಾ ಗೋಪಿನಾಥ್ ಅಭಿಪ್ರಾಯಪಟ್ಟಿದ್ದಾರೆ.

ವಿಶೇಷ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕ ಬೆಳವಣಿಗೆಯು ನಿರೀಕ್ಷೆಗಿಂತ ಉತ್ತಮವಾಗಿದೆ. ಇದು ವಿವಿಧ ಅಂಶಗಳಿಂದ ಪ್ರೇರಿತವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಭಾರತದ ಬೆಳವಣಿಗೆಯು ಕಳೆದ ಹಣಕಾಸು ವರ್ಷದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿ ಸಾಗಿದೆ. ಅದೇ ರೀತಿಯ ಪರಿಣಾಮಗಳು ಮುಂದಿನ ಹಲವು ವರ್ಷಗಳವರೆಗೆ ಸಾಗಲಿದೆ. ಈ ವರ್ಷದ ಮುನ್ಸೂಚನೆಯೂ ಪರಿಣಾಮ ಬೀರುತ್ತಿವೆ. ಮತ್ತೊಂದು ಅಂಶವೆಂದರೆ ಖಾಸಗಿ ಉದ್ಯಮಗಳು ಚೇತರಿಸಿಕೊಳ್ಳುತ್ತಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಗೋಪಿನಾಥ್ ಹೇಳಿದ್ದಾರೆ.

ಎಫ್ಎಂಸಿಜಿ ಮತ್ತು ದ್ವಿಚಕ್ರ ವಾಹನ ಮಾರಾಟದ ಹೊಸ ಅಂಕಿ ಅಂಶಗಳು ಮತ್ತು ಅನುಕೂಲಕರವಾಗಿ ಮಾನ್ಸೂನ್ ಮಳೆ ಸುರಿದಿರುವ ಆಧಾರದ ಮೇಲೆ, 2024-25ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7% ಕ್ಕೆ ಐಎಂಎಫ್ ನಿರೀಕ್ಷಿಸಿದೆ. ಇದು ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರ ನೀಡಿದ 6.5% ಅಂದಾಜಿಗಿಂತ ಹೆಚ್ಚಿನ ಅಂಕಿ ಅಂಶವಾಗಿದೆ. 2027 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಐಎಂಎಫ್ ಭವಿಷ್ಯ ನುಡಿದಿದೆ.

ಕಳೆದ ವರ್ಷ ಖಾಸಗಿ ಕ್ಷೇತ್ರದ ಬೆಳವಣಿಗೆಯನ್ನು ನೋಡಿದರೆ, ಸುಮಾರು 4% ರಷ್ಟಿತ್ತು. ಗ್ರಾಮೀಣ ಬಳಕೆಯ ಚೇತರಿಕೆಯಿಂದ ಅದು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ನೀವು ದ್ವಿಚಕ್ರ ವಾಹನ ಮಾರಾಟ ಪ್ರಗತಿ ನೋಡಿದರೆ ಆಟೋಮೊಬೈಲ್ ಕ್ಷೇತ್ರವೂ ಉತ್ತಮವಾಗಿದೆ. ಉತ್ತಮ ಮಾನ್ಸೂನ್ ಮಳೆ ಬಿದ್ದರೆ ಉತ್ತಮ ಫಸಲನ್ನು ನೋಡಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಕೃಷಿ ಆದಾಯವು ಹೆಚ್ಚುತ್ತಿರುವುದರಿಂದ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚೇತರಿಕೆಯನ್ನು ನೋಡಬಹುದು ಎಂದು ಹೇಳಿದ ಗೋಪಿನಾಥ್, 2024-25ರ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7% ಕ್ಕೆ ಹೆಚ್ಚಿಸಲಾಗಿದೆ ಎಂದು ನುಡಿದರು.

Post a comment

No Reviews