2024-12-24 07:14:10

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಪ್ಯಾಲೆಸ್ಟೈನ್‌ಸದಸ್ಯತ್ವವನ್ನು ಬೆಂಬಲಿಸಿ ಮತ ಹಾಕಿದ ಭಾರತ

ಮೇ14ರಂದು ನಡೆದ ವಿಶೇಷ ಅಧಿವೇಶನದ 10 ನೇ ತುರ್ತು ಸಭೆಯಲ್ಲಿ ಭಾರತ ಪ್ಯಾಲೆಸ್ಟೈನ್‌ನ ಸದಸ್ಯತ್ವವನ್ನು ಬೆಂಬಲಿಸಿ ಪ್ಯಾಲೆಸ್ಟೈನ್‌ನ ಪರವಾಗಿ ಮತ ಹಾಕಿತು.

ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಗಾಜಾ ಸಂಘರ್ಷದಲ್ಲಿ ನಾಗರಿಕರ ಸಾವನ್ನು ಖಂಡಿಸಿ ಎಲ್ಲಾ ದೇಶಗಳು ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವೀಯ ಕಾನೂನನ್ನು ಎಲ್ಲಾ ಸಂದರ್ಭಗಳಲ್ಲಿಯೂ ಗೌರವಿಸಬೇಕು ಎಂದಿದ್ದಾರೆ.

ಮಾತನ್ನು ಮುಂದುವರೆಸುತ್ತ, "ಭಾರತವು ಹಲವು ಬಾರಿ ಶಾಂತಿ ಪರ ನಿಲುವು ವ್ಯಕ್ತ ಪಡಿಸಿದೆ ಹಾಗು ಸಂಘರ್ಷದಲ್ಲಾಗುತ್ತಿರುವ ಮಹಿಳಾ - ಮಕ್ಕಳ ಸಾವು ನೋವುಗಳು ಸಹಿಸಲಾಗದು" ಎಂದಿದ್ದಾರೆ.

ಹಾಗು 2023 ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯನ್ನು ಖಂಡಿಸಿ ಶೀಘ್ರವಾಗಿ ಎಲ್ಲಾ ಒತ್ತೆಯಾಳುಗಳನ್ನು ಯಾವುದೇ ಷರತ್ತು ಅಥವಾ ತಡೆಯಿಲ್ಲದೆ ಬಿಡುಗಡೆ ಮಾಡಬೇಕೆಂದು ಘೋಷಿಸಿದ್ದಾರೆ. ಮಾತನ್ನು ಮುಗಿಸುತ್ತಾ "ಭಾರತವು ದ್ವಿರಾಷ್ಟ್ರ ನಿರ್ಣಯನ್ನು ಸದಾ ಗೌರವಿಸುತ್ತದೇ ಹಾಗಾಗಿ ಪ್ಯಾಲೆಸ್ಟೈನ್ ಗೆ ನ್ಯಾಯ ದೊರೆಕಿಸುವ ದೃಷ್ಟಿಯಲ್ಲಿ   ಪ್ಯಾಲೆಸ್ಟೈನ್ಪರ ಮತ ಹಾಕಿದೆ, ಇದರಿಂದ ಅತಿಶೀಘ್ರವಾಗಿ ಪ್ಯಾಲೆಸ್ಟೈನ್ ಗೆ UN General Assembly ಸದಸ್ಯತ್ವದೊರೆಯಲಿದೆ ಎಂದು ವಿಶ್ವಾಸವಿದೆ" ಎಂದರು.

Post a comment

No Reviews