2024-09-19 04:35:11

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭಾರತದ ಮೊದಲ ಮರುಬಳಕೆ ಹೈಬ್ರಿಡ್ ರಾಕೆಟ್ ಉಡಾವಣೆ ಯಶಸ್ವಿ

ನವದೆಹಲಿ : ಭಾರತವು RHUMI 1 ಹೆಸರಿನ ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್​​​ನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಸ್ಪೇಸ್ ಝೋನ್ ಇಂಡಿಯಾ ಅಭಿವೃದ್ಧಿಪಡಿಸಿದ ಈ ರಾಕೆಟ್​​ನ್ನು ಚೆನ್ನೈನ ECR ನ ತಿರುವಿದಂಧೈನಲ್ಲಿರುವ TTDC ಮೈದಾನದಿಂದ ಉಡಾವಣೆ ಮಾಡಲಾಯಿತು. ರಾಕೆಟ್ ಮೂರು ಕ್ಯೂಬ್ ಉಪಗ್ರಹಗಳು ಮತ್ತು ಐವತ್ತು PICO ಉಪಗ್ರಹಗಳನ್ನು ಉಪಕಕ್ಷೆಯ ಪಥಕ್ಕೆ ತೆಗೆದುಕೊಂಡು ಹೋಗುತ್ತದೆ. ರಾಕೆಟ್‌ನ ಅದ್ಭುತವಾಗಿ ವಿನ್ಯಾಸ ಮಾಡಲಾಗಿದೆ ಹಾಗೂ ಮರುಬಳಕೆ ಮಾಡಲಾಗಿದೆ.

ಈ ಯೋಜನೆಗೆ ಸಹಾಯ ಮಾಡಿದ ಮಾರ್ಟಿನ್ ಗ್ರೂಪ್, ಮೊಬೈಲ್ ಲಾಂಚರ್ ಬಳಸಿಕೊಂಡು ಉಡಾವಣೆ ನಡೆಸಲಾಗಿದೆ. ಇದು ರಾಕೆಟ್‌ನ ಬಹುಮುಖತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ರಾಕೆಟ್ ಪ್ರಮುಖ ವೈಶಿಷ್ಟ್ಯಗಳು:

1 ಹೊಂದಾಣಿಕೆ ಮಾಡಿಕೊಂಡು ಉಡಾಯಣಾ ಮಾಡಲಾಗಿದೆ: ಮಾರ್ಟಿನ್ ಗ್ರೂಪ್‌ ತಿಳಿಸಿರುವ ಪ್ರಕಾರ, ರಾಕೆಟ್ ಉಡಾವಣಾ ಕೋನ ರೂಪವನ್ನು ಹೊಂದಿದ್ದು, ಇದನ್ನು 0ಯಿಂದ 120 ಡಿಗ್ರಿಗಳವರೆಗೆ ನಿಖರವಾಗಿ ಸರಿಹೊಂದಿಸಬಹುದು. ಇದು ತನ್ನ ಪಥದ ಮೇಲೆ ನಿಖರವಾದ ನಿಯಂತ್ರಣವನ್ನು ಹೊಂದಿರುತ್ತದೆ.

2 ಶೈಕ್ಷಣಿಕ ಪರಿಣಾಮ: ಭಾರತದಾದ್ಯಂತ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ರಾಕೆಟ್ ಮತ್ತು ಉಪಗ್ರಹ ತಂತ್ರಜ್ಞಾನದ ಉಚಿತ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

3. CO2-ಆಧಾರಿತ ಪ್ಯಾರಾಚೂಟ್ ವ್ಯವಸ್ಥೆ: ಒಂದು ನವೀನತೆ, ಕಡಿಮೆ ವೆಚ್ಚ, ಪರಿಸರ ಸ್ನೇಹಿ ಹಾಗೂ ರಾಕೆಟ್ ಘಟಕಗಳಲ್ಲಿ ಸುರಕ್ಷಿತ ಮರುಜೋಡಾನೆಯನ್ನು ಕೂಡ ಖಚಿತಪಡಿಸುತ್ತದೆ.

4.ಬಾಹ್ಯಾಕಾಶ ಪರಿಶೋಧನೆ ಮೀರಿ ಕಾರ್ಯಚರಣೆ : ಬಾಹ್ಯಾಕಾಶ ಪರಿಶೋಧನೆಯನ್ನು ಮೀರಿ ಕೃಷಿ, ಪರಿಸರ ಮೇಲ್ವಿಚಾರಣೆ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಿಗೆ ವಿಸ್ತರಿಸುತ್ತವೆ.

 

Post a comment

No Reviews