
ಭಾರತ ಮತ್ತು ಮಾಲ್ಡೀವ್ಸ್ ಸಂಬಂಧ ಸರಿಯಿಲ್ಲದ್ದಿದ್ದರೂ ಭಾರತ ಮಾಲ್ಡೀವ್ಸ್ ಗೆ 420 ಕೋಟಿ ಆರ್ಥಿಕ ನೆರವನ್ನು ನೀಡಿದೆ. ಇದಕ್ಕೆ ಮಾಲ್ಡೀವ್ಸ್ ಭಾರತಕ್ಕೆ ಧನ್ಯವಾದ ಹೇಳಿದೆ. ಸದ್ಭಾವನೆ ಕ್ರಮವಾಗಿ ಮಾಲ್ಡೀವ್ಸ್ ಗೆ ಬಜೆಟ್ ನೆರವನ್ನು ವಿಸ್ತರಣೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಇದರ ಜತೆಗೆ 417 ಕೋಟಿ ರು. ಮೌಲ್ಯದ ಟ್ರೆಸರಿ ಬಿಲ್ ಅನ್ನು ಒಂದು ವರ್ಷ ವಿಸ್ತರಿಸಲೂ ತೀರ್ಮಾನಿಸಿದೆ. ತನ್ನ ಕೋರಿಕೆಯ ಮೇರೆಗೆ ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮಾಲ್ಮೀಮ್ಸ್ ಸರ್ಕಾರ ಸೋಮವಾರ ಪ್ರಕಟಿಸಿದೆ.
ಮಾಲ್ಮೀಮ್ಸ್‌ನ ಹಣಕಾಸು ಇಲಾಖೆ ವಿತರಿಸುವ 417 ಕೋಟಿ ರು. ಮೌಲ್ಯದ (50 ಮಿಲಿಯನ್ ಡಾಲರ್) ಟ್ರೆಸರಿ ಬಿಲ್ ಅನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಖರೀದಿಸಲಿದೆ. ಈ ಹಿಂದೆ ಇದ್ದ ಟ್ರೆಸರಿ ಬಿಲ್ ಅವಧಿ ಮುಗಿದ ಬಳಿಕ ಮತ್ತೊಂದು ವರ್ಷದವರೆಗೆ ಈ ಬಿಲ್ ವಿಸ್ತರಣೆಯಾಗಲಿದೆ ಎಂದು ಹೇಳಿಕೆ ವಿವರಿಸಿದೆ. ಈ ಹಿಂದೆ ಮಾಲ್ಡೀವ್ಸ್ ನ ಅಧ್ಯಕ್ಷ ಮಾಲ್ಡೀವ್ಸ್ ನ ಆರ್ಥಿಕತೆಯನ್ನು ಮೇಲೆತ್ತುವಲ್ಲಿ ಸಹಕರಿಸಿ ಎಂದು ಭಾರತೀಯರಲ್ಲಿ ಮನವಿ ಮಾಡಿದ್ದರು.
Tags:
Poll (Public Option)

Post a comment
Log in to write reviews