
ದಾಂಬುಲಾ: 9ನೇ ಆವೃತ್ತಿ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ನಿರೀಕ್ಷೆಯಂತೆಯೇ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಹರ್ಮನ್‌ಪ್ರೀತ್ ನಾಯಕತ್ವದ ಶುಕ್ರವಾರ ಭಾರತ, ನಡೆದ ಬಾಂಗ್ಲಾದೇಶ ವಿರುದ್ಧ ಸೆಮಿಫೈನಲ್ ನಲ್ಲಿ 10 ವಿಕೆಟ್ 'ಭರ್ಜರಿ ಜಯಭೇರಿ ಬಾರಿಸಿತು. ಇದರೊಂದಿಗೆ ತಂಡ ಸತತ 9ನೇ ಆವೃತ್ತಿಯಲ್ಲೂ ಫೈನಲ್‌ಗೆ ಲಗ್ಗೆ ಇಟ್ಟಿತು.
ಮೊದಲು ಬ್ಯಾಟ್ ಮಾಡಿದ 2018ರ ಚಾಂಪಿಯನ್ ಬಾಂಗ್ಲಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 80 ರನ್ ಕಲೆಹಾಕಿತು. ರೇಣುಕಾ ಸಿಂಗ್ ಹಾಗೂ ರಾಧಾ ಯಾದವ್ ಮಾರಕ ದಾಳಿ ಮುಂದೆ ಬಾಂಗ್ಲಾ ಬ್ಯಾಟರ್‌ಗಳು ನಿರುತ್ತರರಾದರು. ನಾಯಕಿ ನಿಗಾರ್ ಸುಲ್ತಾನ (32), ಶೋರ್ನಾ ಅಕ್ತರ್ (ಔಟಾಗದೆ 19) ಹೊರ ತುಪಡಿಸಿ ಬೇರೆ ಯಾರಿಗೂ ಎರಡಂಕಿ ಮೊತ್ತ ಗಳಿಸಲಾಗಲಿಲ್ಲ. ರೇಣುಕಾ 4 ಓವರಲ್ಲಿ 10 ರನ್‌ಗೆ 3, ರಾಧಾ 14 ರನ್‌ಗೆ 3 ವಿಕೆಟ್ ಕಿತ್ತರು.
ಸುಲಭ ಗುರಿಯನ್ನು ಭಾರತ ಕೇವಲ 11 ಓವರ್‌ಗಳಲ್ಲಿ, ಯಾವುದೇ ವಿಕೆಟ್ ನಷ್ಟವಿಲ್ಲದೇ ಬೆನ್ನತ್ತಿ ಜಯಗಳಿಸಿತು. ಸ್ಮೃತಿ ಮಂಧನಾ 39 ಎಸೆತಗಳಲ್ಲಿ 55 ರನ್ ಸಿಡಿಸಿದರೆ, ಶಫಾಲಿ ವರ್ಮಾ 28 ಎಸೆತಗಳಲ್ಲಿ 26 ರನ್ ಕೊಡುಗೆ ನೀಡಿದರು.
Poll (Public Option)

Post a comment
Log in to write reviews