ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಎಲ್ಲರಿಗೂ ಬೇಕಿಲ್ಲ : ಮತ್ತೆ ಸ್ಪಷ್ಟನೆ ನೀಡಿದ ಸಿಬಿಡಿಟಿ
ನವದೆಹಲಿ: ಎಲ್ಲಾ ಭಾರತೀಯ ಪ್ರಜೆಗಳು ದೇಶ ತೊರೆದು ಹೋಗುವಾಗ ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಲ್ಲಿಸಿಯೇ ಹೋಗಬೇಕು ಎನ್ನುವಂತಹ ವರದಿಗಳನ್ನು ಹಣಕಾಸು ಸಚಿವಾಲಯ ಮತ್ತೊಮ್ಮೆ ನಿರಾಕರಿಸಿದೆ.
ದೇಶ ಬಿಟ್ಟು ಹೋಗುವವರೆಲ್ಲರೂ ಟ್ಯಾಕ್ಸ್ ಕ್ಲಿಯರೆನ್ಸ್ ಪ್ರಮಾಣಪತ್ರ (ಐಟಿಸಿಸಿ) ಪಡೆಯುವುದು ಕಡ್ಡಾಯವೇನಿಲ್ಲ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಆಗಸ್ಟ್ 20 ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಕಳೆದ ತಿಂಗಳಲ್ಲೂ ಜುಲೈ ಸಿಬಿಡಿಟಿ ಈ ಸಂಬಂಧ ಸ್ಪಷ್ಟನೆ ನೀಡಿತ್ತು. ಆದರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಕೆಲ ಸುದ್ದಿ ಮಾಧ್ಯಮಗಳಲ್ಲಿ ಆದಾಯ ತೆರಿಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ವಿಚಾರದಲ್ಲಿ ಗೊಂದಲಕಾರಿ ವರದಿಗಳು ಪ್ರಕಟವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಬಿಡಿಟಿ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿದೆ.
ದೇಶ ಬಿಟ್ಟುಹೋಗುವ ಮುನ್ನ ಎಲ್ಲಾ ಭಾರತೀಯ ಪ್ರಜೆಗಳೂ ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆಯಬೇಕು ಎಂದು ತಪ್ಪಾಗಿ ಹೇಳುವ ವರದಿಗಳು ಪ್ರಕಟವಾಗುತ್ತಿವೆ. ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆ ಬಹಳ ಅಪರೂಪದ ಪ್ರಕರಣಗಳಲ್ಲಿ ಈ ಸಂದರ್ಭಗಳಲ್ಲಿ ವ್ಯಕ್ತಿಯು ಇನ್ಕಮ್ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದು ಅದನ್ನು ಸಲ್ಲಿಸಿದ ಬಳಿಕವೇ ಹೊರ ದೇಶಕ್ಕೆ ಹೋಗಲು ಸಾಧ್ಯ ಎಂದು ನಿಯಮಗಳು ಹೇಳುತ್ತಿವೆ.
Post a comment
Log in to write reviews