2024-12-24 07:11:31

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮಹಾರಾಷ್ಟ್ರದ ಈ ಗ್ರಾಮದಲ್ಲಿ ಮಹಿಳೆಯರೆ ಮನೆಯ ಮಾಲೀಕರು.

ಮಹಾರಾಷ್ಟ್ರ: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಬಕಾಪುರ್‌ನಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸಲು ಶ್ಲಾಘನೀಯ ಹೆಜ್ಜೆಯನ್ನು ಇಡಲಾಗಿದೆ. ಇಲ್ಲಿನ ಮಹಿಳೆಯರು ಸುರಕ್ಷತೆಯಿಂದ ಜೀವನ ನಡೆಸ್ತಿದ್ದಾರೆ. ಕಡಿಮೆ ಜನಸಂಖ್ಯೆ ಇದೆ. ಆದರು ಹಳ್ಳಿಯ ಕೆಲ ನಿಯಮಗಳು  ವಿಶ್ವದಾದ್ಯಂತ ಸುದ್ದಿಮಾಡಿದೆ. ಬಕಾಪುರ್‌ನಲ್ಲಿ ಸುಮಾರು 2,000 ಜನಸಂಖ್ಯೆ ಇದೆ. ಈ ಗ್ರಾಮದಲ್ಲಿ ಪ್ರತಿ ಮನೆ ಮಹಿಳೆಯರ ಹೆಸರಿನಲ್ಲಿದೆ. 2008ರಲ್ಲಿ ಗ್ರಾಮ ಪಂಚಾಯಿತಿ  ಮಾಡಿದ ವಿಶೇಷ ನಿಬಂಧನೆಯಿಂದ ಇದು ಸಾಧ್ಯವಾಗಿದೆ. 
ಪ್ರತಿ ಮನೆಯ ಮುಂದೆ ನಾಮಫಲಕದಲ್ಲಿ ಮಹಿಳೆಯರ ಹೆಸರನ್ನ ಇಡಲಾಗಿದೆ, ಮಾಲೀಕ ಅಥವಾ ಸಹ ಮಾಲೀಕನ ಹೆಸರು ಮಹಿಳೆಯದ್ದಾಗಿರುತ್ತದೆ. ಸುದಮ್ರಾವ್ ಪಾಲಸ್ಕರ್ ಅವರು ಗ್ರಾಮದ ಸರಪಂಚಾಗಿದ್ದಾಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೊದಲ ಕೆಲವು ಅನುಭವಗಳ ಆಧಾರದ ಮೇಲೆ, ಪ್ರತಿ ಕುಟುಂಬದ ಮಹಿಳೆಯನ್ನು ತನ್ನ ಮನೆಯ ಮಾಲೀಕರನ್ನಾಗಿ ಮಾಡಬೇಕು ಎಂದು ನಿರ್ಧರಿಸಿ, ಗ್ರಾಮ ಪಂಚಾಯತಿ ಸದಸ್ಯರ ಮುಂದೆ ಈ ಯೋಜನೆಯಿಟ್ಟಾಗ ಯಾರೊಬ್ಬರೂ ಇದನ್ನು ತಿರಸ್ಕರಿಸಲಿಲ್ಲ ಎಂದು ಪಾಲಸ್ಕರ್ ಹೇಳಿದ್ದಾರೆ. ಬಾಕಾಪುರದ ಸರಪಂಚ್ ಗ್ರಾಮ ಮುಖ್ಯಸ್ಥೆ ಕವಿತಾ ಸಾಳ್ವೆ, ಈ ನಿರ್ಧಾರವು ನನ್ನ ಗ್ರಾಮದ ಮಹಿಳೆಯರಿಗೆ ಮನೆಯ ವಿಷಯಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಟ್ಟಿದೆ ಎನ್ನುತ್ತಾರೆ.   
ಸಾಳ್ವೆ ಕಳೆದ 21 ವರ್ಷಗಳಿಂದ ಬಾಕಾಪುರದಲ್ಲಿ ವಾಸಿಸುತ್ತಿದ್ದಾರೆ. ಮೊದಲು ಮನೆಯ ಮಹಿಳೆಯರ ಒಪ್ಪಿಗೆ ಇಲ್ಲದೇ ಗಂಡಸರು ಮನೆ ಮಾರುತ್ತಿದ್ದರು. ಇದರಿಂದ ಕುಟುಂಬಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿತ್ತು. ಮದ್ಯಪಾನ ಮಾಡುತ್ತಿದ್ದ ಪುರುಷರು ಮನೆ ಮಾರಾಟ ಮಾಡ್ತಾರೆ ಎಂಬ ಭಯದಲ್ಲಿಯೇ ಮಹಿಳೆಯರು ಬದುಕುತ್ತಿದ್ದರು. ಈಗ ಮಹಿಳೆಯರನ್ನು ಮನೆಯ ಮಾಲೀಕರನ್ನಾಗಿ ಮಾಡಿರುವುದು ಇಲ್ಲಿನ ಮಹಿಳೆಯರಲ್ಲಿ ಸಬಲೀಕರಣ ಮತ್ತು ಭದ್ರತೆಯ ಭಾವನೆ ಮೂಡಿಸಿದೆ. ಅವರು ಮನೆಯ ಆರ್ಥಿಕ ಸಮಸ್ಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.  ಆರ್ಥಿಕ ಸ್ಥಿತಿ ಹಾಗೂ ಮನೆಯ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಮಹಿಳೆಯರು ಪಡೆದಿದ್ದಾರೆ.  
ಈ ಗ್ರಾಮದಲ್ಲಿ ಕೆಲವೊಂದು ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದೆ. ಈ ಗ್ರಾಮದಲ್ಲಿ ಧೂಮಪಾನ, ತಂಬಾಕು ಸೇವನೆ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಶೇಷವೆಂದರೆ ಈ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಯಾವುದೇ ಕ್ರೈಂ ನಡೆದಿಲ್ಲ, ಒಗ್ಗಟ್ಟಾಗಿ ಎಲ್ಲ ಮಹಿಳೆಯರು ಕೆಲಸ ಮಾಡುವ ಕಾರಣ ಈ ಗ್ರಾಮ ಬಹಳ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ ಎಂದು ಬಾಕಾಪುರದ ಸರಪಂಚ್ ಗ್ರಾಮ ಮುಖ್ಯಸ್ಥೆ ಕವಿತಾ ಸಾಳ್ವೆ ಹೇಳಿದರು.

Post a comment

No Reviews