
ಚಿಕ್ಕಮಗಳೂರು: ನಿಷೇಧಿತ ಪ್ರೆದೇಶ ಎಂದು ಘೋಷಿಸಿದ್ದ ಜಲಪಾತದಲ್ಲಿ ಮೋಜು ಮಸ್ತಿಯಲ್ಲಿ ನಿರತರಾಗಿದ್ದ ಯುವಕರನ್ನು ಪೊಲೀಸರು ಚಡ್ಡಿಯಲ್ಲೇ ಓಡಿಸಿದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಫಾಲ್ಸ್ ಬಳಿ ನಡೆದಿದೆ.
ನಿಷೇಧಿತ ಪ್ರದೇಶದಲ್ಲಿ ಬಂಡೆ ಹತ್ತಿ ಹುಚ್ಚಾಟ ತೋರುತ್ತಿದ್ದ ಪ್ರವಾಸಿಗರಿಗೆ ಬಿಸಿ ಮುಟ್ಟಿಸಿದ ಬಣಕಲ್ ಗಸ್ತು ಪೊಲೀಸರು ಯುವಕರ ಬಟ್ಟೆಗಳನ್ನು ತಂದು ಗಸ್ತು ವಾಹನಕ್ಕೆ ತುಂಬಿ ಶಾಕ್ ನೀಡಿದ್ದಾರೆ. ಬಳಿಕ ಪೊಲೀಸರ ಹಿಂದೆ ಚಡ್ಡಿಯಲ್ಲೇ ಓಡಿ ಬಂದ ಯುವಕರು ದಯವಿಟ್ಟು ಬಟ್ಟೆ ಕೊಡಿ ಎಂದು ಅಂಗಲಾಚಿದ್ದಾರೆ. ಯುವಕರು ಬಟ್ಟೆ ಕೊಡುವಂತೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಕೊನೆಗೆ ಪೊಲೀಸರು ಎಚ್ಚರಿಕೆ ನೀಡಿ ಬಟ್ಟೆಗಳನ್ನು ಕೊಟ್ಟು ಕಳುಹಿಸಿದ್ದಾರೆ.
Poll (Public Option)

Post a comment
Log in to write reviews