
ಹಾಸನ : ಹಾಸನಾಂಬೆ ಮಹೋತ್ಸವ ಐದನೇ ದಿನಕ್ಕೆ ಕಾಲಿಟ್ಟಿದ್ದು, ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿದೇವತೆಯನ್ನು ಕಾಣಲು ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ನಾಲ್ಕೇ ದಿನಗಳಲ್ಲಿ ಹಾಸನಾಬ ದೇಗುಲಕ್ಕೆ ಕೋಟಿ ಕೋಟಿ ರೂ. ಆದಾಯ ಹರಿದು ಬರುತ್ತಿದೆ.
ಹೌದು. ಹಾಸನಾಂಬೆ ಮಹೋತ್ಸವ ಆರಂಭವಾಗಿ ನಾಲ್ಕೇ ದಿನಗಳಲ್ಲಿ ಟಿಕೆಟ್ ಮಾರಾಟದಿಂದ 6 ಕೋಟಿ ರೂ. ಮತ್ತು ಲಾಡು ಪ್ರಸಾದ ಮಾರಾಟದಿಂದ 45 ಲಕ್ಷ ರೂ. ಆದಾಯ ಗಳಿಸಲಾಗಿದೆ.
1000ರೂ ಟಿಕೆಟ್ ಮಾರಾಟದಿಂದ 4ಕೋಟಿ 25 ಲಕ್ಷ ರೂ. ಮತ್ತು 300ರೂ ಟಿಕೆಟ್ ಮಾರಾಟದಿಂದ 1 ಕೋಟಿ 30 ಲಕ್ಷ ರೂ. ಆದಾಯ ಗಳಿಸಲಾಗಿದೆ.
ಇಂದಿನ ದಿನ ಸೇರಿದಂತೆ ಹಾಸನಾಂಬೆ ದರ್ಶನಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇದೆ. ಹೀಗಾಗಿ ಇತಿಹಾಸದಲ್ಲೇ ಹಾಸನಾಂಬೆ ಆದಾಯ ದಾಖಲೆಯತ್ತ ಸಾಗಿದೆ.
ಕಳೆದ ಬಾರಿ 9 ಕೋಟಿ ಆದಾಯ ಗಳಿಸಿ ದಾಖಲೆ ಬರೆಯಲಾಗಿತ್ತು. ಈ ಬಾರಿ ಹುಂಡಿಯಲ್ಲಿ ಸಂಗ್ರಹ ಹಣ ಹೊರತು ಪಡಿಸಿಯೇ ಕೋಟಿ ಕೋಟಿ ರೂ. ಆದಾಯ ಸಂಗ್ರಹವಾಗಿದೆ.
Poll (Public Option)

Post a comment
Log in to write reviews