2024-12-24 06:46:07

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಿಸಿ ಊಟದಲ್ಲಿ ಹುಳ, ಭತ್ತ, ಕಲ್ಲು - ಶಾಲಾ ಮಂಡಳಿ ವಿರುದ್ಧ ರೊಚ್ಚಿಗೆದ್ದ ಪೋಷಕರು

ಬೆಳಗಾವಿ: ಖಾನಾಪುರ್ ತಾಲೂಕಿನ ಹಲಸಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುವ ಮಧ್ಯಾಹ್ನ ಬಿಸಿ ಊಟದಲ್ಲಿ ಕಲ್ಲು, ನುಸಿ, ಹುಳಗಳು ಕಂಡು ಬಂದಿದ್ದು, ಈ ಕುರಿತು ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಲೆಯಲ್ಲಿ ನೀಡಲಾಗುವ ಬಿಸಿ ಊಟವನ್ನು ಪ್ರತಿದಿನ ಹೊರ ಗುತ್ತಿಗೆ ಆಧಾರದಲ್ಲಿ ಸ್ಥಳೀಯ “ಸಮರ್ಥ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಂ.ಕೆ.ಹುಬ್ಬಳ್ಳಿ” ಸಂಸ್ಥೆಯು ವಿದ್ಯಾರ್ಥಿಗಳಿಗೆ ವಿತರಿಸುತ್ತಿತ್ತು.
ಆದರೆ ಈ ಶೈಕ್ಷಣಿಕ ವರ್ಷದಲ್ಲಿ ವಿತರಿಸಲಾಗುತ್ತಿರುವ ಬಿಸಿ ಊಟದಲ್ಲಿ ಪ್ರತಿದಿನ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ತಿಳಿಸಿದ್ದಾರೆ. ಈ ಕಾರಣ ಪೋಷಕರು ಊಟದ ವೇಳೆಗೆ ಶಾಲೆಗೆ ಭೇಟಿನೀಡಿ ಪರೀಕ್ಷಿಸಿದಾಗ ಊಟದಲ್ಲಿ ಎತೇಚ್ಛವಾಗಿ ಹುಳಗಳು, ಕಲ್ಲು ಮತ್ತು ಭತ್ತಗಳು ಕಂಡುಬಂದಿದೆ. ಈ ರೀತಿಯ ಕಳಪೆ ಆಹಾರ ವಿತರಕರ ವಿರುದ್ಧ ಕೂಡಲೇ ಶಾಲಾ ಮಂಡಳಿ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
 

Post a comment

No Reviews