
ನವದೆಹಲಿ: ದೆಹಲಿಯಲ್ಲಿ ಎನ್.ಡಿ.ಎ ಮೈತ್ರಿ ಕೂಟದ ಮಹತ್ವದ ಸಭೆ ನಡೆಯಲಿದ್ದು ಕೇಂದ್ರದಲ್ಲಿ ಎನ್ಡಿಎ ಸರ್ಕಾರ ರಚನೆ ಕುರಿತು ಚರ್ಚೆ ನಡೆಯಲಿದೆ. ಖಾತೆಗಳ ಹಂಚಿಕೆಯ ಬಗ್ಗೆಯೂ ಸಮಾಲೋಚನೆ ನಡೆಯಲಿದ್ದು ಡಿಡಿಪಿ ನಾಯಕ ಚಂದ್ರಬಾಬು, ಜೆಡಿಯು ನಾಯಕ ನಿತೀಶ್ ಕುಮಾರ್, ಜೆಡಿಎಸ್ ವರಿ ವರಿಷ್ಠರಾದ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಮೈತ್ರಿ ನಾಯಕರ ಸಮಾಗಮ ಪಾಲ್ಗೊಳ್ಳಲಿದೆ.
ಈಗಾಗಲೇ ದೆಹಲಿಗೆ ಹೆಚ್ ಡಿಡಿ ಮತ್ತು ಎಚ್ಡಿಕೆ ಪಯಣ ಬೆಳೆಸಿದ್ದಾರೆ. ಸರಳ ಬಹುಮತಗಳಿರುವ ಎನ್‌ಡಿಎ ಮೈತ್ರಿಕೂಟದಿಂದ ಬಿಜೆಪಿ ನೇತೃತ್ವದ ಸರ್ಕಾರ ರಚಿಸುವುದು ಖಚಿತ ಹಾಗೆ ಮೂರನೇ ಬಾರಿ ಪ್ರಧಾನಿ ಗದ್ದುಗೆ ಏರಲಿರುವ ಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಶನಿವಾರ ನಿಗದಿ ಹಿನ್ನೆಲೆಯಲ್ಲಿ ಇಂದು 11:00 ಗಂಟೆಗೆ ಸಂಸದರ ಮಹತ್ವದ ಸಭೆ ನಡೆಯಲಿದ್ದು ಸಭೆಯಲ್ಲಿ ಎಲ್ಲಾ ಮೈತ್ರಿ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರು, ಆಡಳಿತ ಇರುವ ರಾಜ್ಯಗಳ ಸಿಎಂ ,ಡಿಸಿಎಂ, ಭಾಗಿಯಾಗಲಿದ್ದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಭೆ ನಡೆಯಲಿದೆ.
Poll (Public Option)

Post a comment
Log in to write reviews