
ಸೌತ್ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನಗೆ ಬಿಗ್ ಶಾಕ್ ಎದುರಾಗಿದೆ. ನಾಗಾರ್ಜುನ ಒಡೆತನದ ಎನ್ ಕನ್ವೆನ್ಷನ್ ಹಾಲ್ ನ್ನು ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ಭಾರೀ ವಿಡರೋಧದ ನಡುವೆಯೇ ನೆಲಸಮ ಕಾರ್ಯ ನಡೆಯುತ್ತಿದೆ. 6 ಕ್ರೇನ್‌ಗಳೊಂದಿಗೆ ಎನ್ ಕನ್ವೆನ್ಶನ್ ಹಾಲ್‌ನ್ನು ಅನ್ನು ಕೆಡವುತ್ತಿದ್ದಾರೆ.
ತುಮ್ಮಿಡಿ ಕುಂಟಾ ಕೆರೆ ಒತ್ತುವರಿ ಮಾಡಿ ಕನ್ವೆನ್ಷನ್ ಹಾಲ್ ನಿರ್ಮಿಸಿದ್ದಾರೆ ಎಂಬ ಆರೋಪ ನಾಗಾರ್ಜುನ ಮೇಲಿದೆ. ಮೂರೂವರೆ ಎಕರೆ ಒತ್ತುವರಿ ಮಾಡಿಕೊಂಡು ಕನ್ವೆನ್ಷನ್ ಹಾಲ್ ನಿರ್ಮಿಸಿದ್ದಾರೆ ಎಂಬ ಆರೋಪದ ಮೇಲೆ ನಾಗಾರ್ಜುನ ವಿರುದ್ಧ ದೂರು ಸಲ್ಲಿಸಲಾಗಿತ್ತು. ಇದೀಗ ಈ ಎನ್ ಕನ್ವೆನ್ಶನ್ ಹಾಲ್‌ನ್ನು ಧ್ವಂಸಗೊಳಿಸಲಾಗುತ್ತಿದೆ.
ಎನ್ ಕನ್ವೆನ್ಶನ್ ಹಾಲ್ ಬಳಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಚಿತ್ರೀಕರಿಸಲು ಮಾಧ್ಯಮಗಳಿಗೆ ಅವಕಾಶವಿಲ್ಲ. ಆದರೆ ಎನ್ ಕನ್ವೆನ್ಷನ್ ಹಾಲ್ ಧ್ವಂಸಕ್ಕೆ ಲೋಕಾಯುಕ್ತ ಈಗಾಗಲೇ ಆದೇಶ ನೀಡಿದೆ. ಆದರೆ ಹಿಂದಿನ ಸರ್ಕಾರಲೋಕಾಯುಕ್ತ ಆದೇಶವನ್ನು ನಿರ್ಲಕ್ಷಿಸಿತ್ತು.
ಕಳೆದ ಕೆಲವು ದಿನಗಳಿಂದ ಹೈದರಾಬಾದ್‌ನಲ್ಲಿ ಅಕ್ರಮ ನಿರ್ಮಾಣ ಕಟ್ಟಡಗಳ ಮೇಲೆ ವಿಶೇಷ ಗಮನ ಹರಿಸಿದೆ. ಈಗ ಅವುಗಳನ್ನು ಗುರುತಿಸಲಾಗಿದೆ ಮತ್ತು ನೆಲಸಮಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಅದರ ಭಾಗವಾಗಿ ನಾಗಾರ್ಜುನಗೆ ಸಂಬಂಧಿಸಿದಂತೆ ಮಾದಾಪುರದಲ್ಲಿದ್ದ ಎನ್ ಕನ್ವೆನ್ಷನ್ ಹಾಲ್‌ಧ್ವಂಸಗೊಳಿಸಲಾಗಿದೆ.
Poll (Public Option)

Post a comment
Log in to write reviews