
ರಾಜ್ಯದಲ್ಲಿ ಮರು ಪರೀಕ್ಷೆ ಬರೆದ ವಿದಾರ್ಥಿಗಳು ಕಾತುರದಿಂದ ಕಾದು ಕುಳಿತಿದ್ದ 2024 ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ 2 ರ ಫಲಿತಾಂಶ ಪ್ರಕಟವಾಗಿದೆ. ದ್ವಿತೀಯ ಪಿ ಯುಸಿ ಯ ಮರು ಪರೀಕ್ಷೆಯು ಏಪ್ರಿಲ್ 29 ರಿಂದ ಮೇ 16 ರವರೆಗೂ ನಡೆದಿತ್ತು, ಒಟ್ಟು 1 ಲಕ್ಷದ 48 ಸಾವಿರ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 52 ಸಾವಿರ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ 26,496 ಮಂದಿ ಬಾಲಕರು ಹಾಗೂ 26,009 ಮಂದಿ ಬಾಲಕಿಯರು ಪಾಸ್ ಆಗಿದ್ದಾರೆ. ಇದರ ಮೂಲಕ ಒಟ್ಟು ಶೇಕಡವಾರು ಉತ್ತೀರ್ಣ ಪ್ರಮಾಣ 35.25% ರಷ್ಟು ಆಗಿದೆ.
Poll (Public Option)

Post a comment
Log in to write reviews