
ಬೆಂಗಳೂರು: ನೀವು ಬೇಕಾಬಿಟ್ಟಿಯಾಗಿ ಹಣವನ್ನ ಡ್ರಾ ಮಾಡಿಕೊಳ್ಳುತ್ತಿದ್ದರೆ ನಿಮ್ಮ ಖಾತೆಯ ಹಣ ಖಾಲಿಯಾಗಬಹುದು. ಯಾಕಂದ್ರೆ ನಿಗದಿತ ಉಚಿತ ಮಿತಿಯ ನಂತರ ಎಟಿಎಂನಿಂದ ಹಣವನ್ನು ಹಿಂಪಡೆಯಲು ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವನ್ನು ನಿರ್ವಾಹಕರು ಸಂಪರ್ಕಿಸಿದ್ದು ಆಪರೇಟರ್ಗಳು ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ ಆದ್ದರಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಇದರ ಬೇಡಿಕೆಯಾದ್ರು ಏನು?
ಇಂಡಸ್ಟ್ರಿ ಒಕ್ಕೂಟ ಪ್ರತಿ ವೈವಾಟಿಕೆ ಗರಿಷ್ಠ 23 ರೂಪಾಯಿಗಳಿಗೆ ಇಂಟರ್ಚೇಂಜ್ ಮೂಲಕ ಶುಲ್ಕವನ್ನು ಹೆಚ್ಚಿಸಬೇಕು ಎಂದಿದೆ. ಇದು ವ್ಯಾಪಾರಕ್ಕೆ ಹೆಚ್ಚಿನ ಹಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಎಟಿಎಂ ತಯಾರಕ ಎಜಿಎಸ್ ಟ್ರಾನ್ಸಾಕ್ಟ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸ್ಟ್ಯಾನ್ಲಿ ಜಾನ್ಸನ್ ಹೇಳಿದ್ದಾರೆ. ಎಟಿಎಂ ಇಂಡಸ್ಟ್ರಿ ಒಕ್ಕೂಟ ಶುಲ್ಕವನ್ನು 21 ರೂ. ಗೆ ಹೆಚ್ಚಿಸಲು ಮನವಿ ಮಾಡಿದ್ದೇವೆ ಆದರೆ ಇತರ ಕೆಲವು ಎಟಿಎಂ ತಯಾರು ಇದನ್ನು 23 ರೂ.ಗೆ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಈ ಬಗ್ಗೆ ಆರ್‌ಬಿಐ ಇನ್ನೂ ಅಧಿಕೃತ ಸ್ಪಷ್ಟನೆ ನೀಡಿಲ್ಲ.
Poll (Public Option)

Post a comment
Log in to write reviews