ಉಡುಪಿ: ಸ್ವರ್ಗಕ್ಕೆ ಹೋಗಬಯಸುವವರು ಎಲ್ಲರೂ ಸಂಸ್ಕೃತ ಭಾಷೆಯನ್ನು ಕಲಿಯ ಬೇಕು. ಇದು ಪವಿತ್ರ, ಪಾವನ ಮತ್ತು ಶ್ರೇಷ್ಠವಾಗಿರುವ ಭಾಷೆ ಎಂದು ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ಸ್ವಾಮಿ ಹೇಳಿದ್ದಾರೆ.
ಪರ್ಯಾಯ ಶ್ರೀಪುತ್ತಿಗೆ ಮಠ, ಶ್ರೀಕೃಷ್ಣ ಮಠದ ವತಿಯಿಂದ ರಾಜಾಂಗಣದಲ್ಲಿ ನಡೆದ ಶ್ರೀಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಕೃತ ಸರಳ, ಸುಂದರ ಮತ್ತು ಸುಲಭವಾದ ಭಾಷೆಯಾಗಿದ್ದು, ಇದು ವಿಶ್ವಭಾಷೆ, ದೇವಭಾಷೆಯಾಗಿದೆ. ಎಲ್ಲಾ ಭಾಷೆಗಳ ಮೂಲ ಮತ್ತು ಜನನಿ ಸಂಸ್ಕೃತವಾಗಿದೆ. ಇದು ಕೇವಲ ಭಾರತೀಯ ಭಾಷೆಗಳ ಮೂಲವಲ್ಲದೇ ಆಂಗ್ಲಭಾಷೆಯ ಮೂಲವೂ ಆಗಿದೆ ಎಂದು ಅವರು ತಿಳಿಸಿದರು.
ಕೇರಳ ರಾಜ್ಯಪಾಲ ಮುಹಮ್ಮದ್ ಆರೀಫ್ ಖಾನ್ ಮಾತನಾಡಿ, ದೇವರಿಗೆ ಯಾವ ಭಾಷೆಯಲ್ಲಿ ಪ್ರಾರ್ಥನೆ ಮಾಡುತ್ತೇವೆ ಎನ್ನುವುದಕ್ಕಿಂತ ಯಾವ ಭಾವದಲ್ಲಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ವೈವಿಧ್ಯತೆ ನಮ್ಮ ಪ್ರಕೃತಿಯ ನಿಯಮ. ಈ ವೈವಿಧ್ಯತೆ ಯಿಂದಲೇ ನಾವೆಲ್ಲರೂ ಸುಖಕರವಾಗಿರುವುದಕ್ಕೆ ಸಾಧ್ಯ ಎಂದರು.
Post a comment
Log in to write reviews