ಟಾಪ್ 10 ನ್ಯೂಸ್
ಡೆಂಗ್ಯೂ ಟೆಸ್ಟಿಂಗ್ ಬೆಲೆ ಹೆಚ್ಚಳ ಕಂಡುಬಂದರೆ ಪರವಾನಗಿ ರದ್ದು: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಡೆಂಘೀ ಪ್ರಕರಣಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗಿದ್ದು, ಟೆಸ್ಟಿಂಗ್‌ಗೆ ಬೆಲೆ ಹೆಚ್ಚಳ ಕಂಡುಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಪರವಾನಗಿ ರದ್ಧತಿಯಂತಹ ಬಿಗು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾರ್ವಾ ಉತ್ಪತ್ತಿ ಸ್ಥಳಗಳಲ್ಲಿ ನಿಯಂತ್ರಣ ಮಾಡುವ ಕೆಲಸ ಮೊದಲು ಆಗಬೇಕು. ಸಂಗ್ರಹವಾದ ನೀರಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತದೆ, ಅದನ್ನು ನಿಯಂತ್ರಿಸಬೇಕು
ಈ ವಿಚಾರಗಳನ್ನು ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಮನೆಗಳ ಮುಂದೆ ನೀರು ನಿಲ್ಲುತ್ತದೆ. ಡೆಂಘೀ, ವೈರಲ್ ಜ್ವರಗಳಿಂದ ಸಾವು ಸಂಭವಿಸದಂತೆ ತಡೆಯಬೇಕು ಎಂದು ಅವರು ಹೇಳಿದರು.
Poll (Public Option)

Post a comment
Log in to write reviews