
ಉತ್ತರಪ್ರದೇಶ: ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕಿಳಿದ ಐಎಎಸ್ ಅಧಿಕಾರಿ ತಮ್ಮ ಹುದ್ದೆ ಹಿಂಪಡೆಯಲು ಮುಂದಾಗಿದ್ದರೂ ಯೋಗಿ ಸರ್ಕಾರ ಕ್ಯಾರೇ ಎಂದಿಲ್ಲ.
ರಾಜಕೀಯದಲ್ಲಿ ಆಸಕ್ತಿ ಹೊಂದಿದ ಅಭಿಷೇಕ್ ಸಿಂಗ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಬಿಜೆಪಿಯಿಂದ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಈ ನಿರಾಶೆಯಿಂದಾಗಿ ಇದೀಗ ತಮ್ಮ ರಾಜೀನಾಮೆ ವಾಪಾಸ್ ಪಡೆಯಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅಭಿಷೇಕ್ ಸಿಂಗ್ ಕಳೆದ ವರ್ಷ ರಜೆ ಹಾಕಿ ಗೈರು ಹಾಜರಾದ ಆರೋಪದ ಮೇಲೆ ಅಂದಿನ ಹುದ್ದೆಯಿಂದ ಅಮಾನತು ಮಾಡಲಾಗಿತ್ತು. ಇದಕ್ಕೂ ಮುನ್ನ 2014ರಲ್ಲಿ ಕಂದಾಯ ಮಂಡಳಿಗೆ ಸಂಬಂಧಿಸಿದ ಪ್ರಕರಣದಲ್ಲೂ ಅಮಾನತುಗೊಂಡಿದ್ದರು. ಇದಾದ ನಂತರವೂ ಸೇವೆಯಲ್ಲಿ ಮುಂದುವರೆದಿದ್ದ ಸಿಂಗ್, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಿನಾಮೆ ನೀಡಿದ್ದರು. ಈಗ ಮತ್ತೊಮ್ಮೆ ಹುದ್ದೆ ನೀಡಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದಕ್ಕೆ ಉತ್ತರ ಪ್ರದೇಶದ ಯೋಗಿ ನೇತೃತ್ವದ ಸರ್ಕಾರ ಈ ಮನವಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ
Poll (Public Option)

Post a comment
Log in to write reviews