
ಬೆಂಗಳೂರು: ಒಂದಲ್ಲ ಎರಡಲ್ಲ ಲಕ್ಷ ಲಕ್ಷ ಸಿದ್ದರಾಮಯ್ಯನಂತಹ (Siddaramaiah) ಜನ ಬಂದರೂ ನಾನು ಹೆದರುವುದಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾಕೆ ಸಿದ್ದರಾಮಯ್ಯಗೆ ಹೆದರಬೇಕು. ನಾನೇನು ಸಿದ್ದರಾಮಯ್ಯ ನೆರಳಲ್ಲಿ ರಾಜಕೀಯಕ್ಕೆ ಬಂದಿದ್ದೀನಾ? ಸ್ವಂತ ದುಡಿಮೆಯಲ್ಲಿ, ಕಾರ್ಯಕರ್ತರ ದುಡಿಮೆಯಲ್ಲಿ ಬಂದಿದ್ದೇನೆ. ಸಿದ್ದರಾಮಯ್ಯ ಹೆಸರಲ್ಲಿ ರಾಜಕೀಯ ಮಾಡಿಲ್ಲ. ದೇವೇಗೌಡರ (Devegowda) ನೆರಳಲ್ಲಿ ಬಂದ ನಾನು ನಾಡಿನ ಜನರಿಗೆ ಮಾತ್ರ ಹೆದರುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ದೆವ್ವ ಆಗಿದ್ದರೆ ಭಯ ಪಡುತ್ತಿದ್ದೆ. ಆದರೆ ಈಗ ಹೆದರಲ್ಲ ಎಂದಿದ್ದಾರೆ. ನನ್ನ ಜೆಡಿಎಸ್ (JDS) ಪಕ್ಷ ದುರ್ಬಲ ಆಗುತ್ತೋ ಬಲಗೊಳ್ಳುತ್ತೋ ಎನ್ನುವುದನ್ನು ದೇವರು ನೋಡಿಕೊಳ್ಳುತ್ತಾನೆ. ಮೊದಲು ಸಮಸ್ಯೆಯಲ್ಲಿರುವುದನ್ನು ಬಗೆಹರಿಸಿಕೊಳ್ಳಿ. ಕುಮಾರಸ್ವಾಮಿ ಹೆದರುವುದು ಕೇವಲ ದೇವರಿಗೆ ಮತ್ತು ಜನರಿಗೆ ಮಾತ್ರ ಎಂದರು.
ಕುಮಾರಸ್ವಾಮಿ ಹತ್ತಿರ ಇವರದು ಏನು ನಡೆಯಲ್ಲ. ಎಫ್‌ಐಆರ್ ಮಾಡಿ ಹೆದರಿಸುವ ಕೆಲಸ ಅಷ್ಟೇ. ಕಾಲ ಪ್ರತಿಯೊಂದಕ್ಕೂ ಉತ್ತರ ನೀಡಲಿದೆ. ಈ ಸರ್ಕಾರ ಎಲ್ಲವನ್ನು ಬಿಟ್ಟಿರುವ ಸರ್ಕಾರ. ಭಯ ಭಕ್ತಿ ಇಲ್ಲದ ಭಂಡ ಸರ್ಕಾರ. ಇವತ್ತಿನ ರಾಜಕೀಯ ಬೆಳವಣಿಗೆಗೆ ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿದರು.
Poll (Public Option)

Post a comment
Log in to write reviews