2024-09-19 04:37:39

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ ಎಂದು ಭಾವಿಸಿದ್ದೇನೆ – ಪ್ರಧಾನಿ ಮೋದಿಗೆ ಸಿದ್ದು ಮನವಿ

ಬೆಂಗಳೂರು : ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಭಿನಂದಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ  ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ. ಸಂಪದ್ಭರಿತ ಕರ್ನಾಟಕದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ನಿಮ್ಮ ಜೊತೆಯಾಗಿ ಶ್ರಮಿಸುವ ದಿನಗಳನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. 

ಇನ್ನು ಕೇಂದ್ರ ಸರ್ಕಾರಕ್ಕೆ ನೂತನ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು. ಮಾನ್ಯ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ NDA ಸರಕಾರದಲ್ಲಿ ಸಂಪುಟ ದರ್ಜೆ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದೆ. ಅಧಿಕಾರ ಗೌಪ್ಯತೆಯ ಪ್ರತಿಜ್ಞೆ ಭೋಧಿಸಿದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಗೌರವಪೂರ್ವಕ ಧನ್ಯವಾದಗಳು. ದೇಶ ಸೇವೆಗೆ ಅವಕಾಶ ಕಲ್ಪಿಸಿ ಈ ಅಮೃತಕ್ಷಣಕ್ಕೆ ಕಾರಣೀಭೂತರಾದ ಮಂಡ್ಯ ಲೋಕಸಭೆ ಕ್ಷೇತ್ರದ ಮಹಾಜನತೆಗೆ, ಸಮಸ್ತ ಕನ್ನಡಿಗರಿಗೆ ಹಾಗೂ  ಜನತಾದಳ ಮತ್ತು  ಬಿಜೆಪಿ ಪಕ್ಷಗಳ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ತುಂಬು ಹೃದಯದ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿದ್ದಾರೆ. 

ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು,  ಸ್ವಾತಂತ್ರ್ಯಾ ನಂತರ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಚಾರಿತ್ರಿಕ ಪ್ರಧಾನಿ ನಮ್ಮ ನೆಚ್ಚಿನ ನರೇಂದ್ರ ಮೋದಿ ಅವರು  ಭಾರತದ ಹೆಮ್ಮೆ. 18 ನೇ ಲೋಕಸಭೆಗೆ ನಡೆದ ಮಹಾ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿಕೂಟದ ಯಶಸ್ವಿ ನಾಯಕರಾಗಿ, ದಶಕ ಪೂರೈಸಿದ ಸಮರ್ಥ ಪ್ರಧಾನಿಯಾಗಿ ತಮ್ಮ ಅಭಿವೃದ್ಧಿ ಕಾರ್ಯಗಳಿಂದ ಶತಕೋಟಿ ಭಾರತೀಯರು ಮೆಚ್ಚಿದ ನೇತಾರರಾಗಿ 3 ನೇ ಬಾರಿ ಪ್ರಧಾನಿ ಪಟ್ಟಕ್ಕೇರುತ್ತಿರುವ ಗೌರವಾನ್ವಿ ಮೋದಿ ಅವರನ್ನು ಕರುನಾಡಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕವಾಗಿ  ರಾಜ್ಯ ಬಿಜೆಪಿ ಅಭಿನಂದಿಸುತ್ತದೆ. ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಎನ್.ಡಿ.ಎ ಮೈತ್ರಿ ಕೂಟಕ್ಕೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಕೊಟ್ಟಿರುವ ಕರ್ನಾಟಕದ ಜನತೆ ಮೋದಿ ಅವರ ಹ್ಯಾಟ್ರಿಕ್ ಸಾಧನೆಯ ಸಡಗರದಲ್ಲಿ ಬಹುದೊಡ್ಡ ಭಾಗೀದಾರರಾಗಿದ್ದು ಜಾಗತಿಕ ಮಟ್ಟದಲ್ಲಿ ಮೋದಿ ಜೀ ಅವರ ನೇತೃತ್ವದಲ್ಲಿ ಮುಂಚೂಣಿ ಸ್ಥಾನದಲ್ಲಿ ನಡೆದಿರುವ ಭಾರತದ ಅಭಿವೃದ್ಧಿಯು ಉತ್ತುಂಗಕ್ಕೆ ತಲುಪಬೇಕೆಂದು ಬಯಸಿ ಆಶೀರ್ವದಿಸಿದ್ದಾರೆ, ಅಂತೆಯೇ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆಗಳನ್ನು ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದಿಂದ ನಿರೀಕ್ಷಿಸಿದ್ದಾರೆ. ಅಚಲ ವಿಶ್ವಾಸದ ಸಂಕೇತವಾಗಿರುವ ಮೋದಿ ಜೀ ಅವರ ಆಡಳಿತದಲ್ಲಿ ಕನ್ನಡನಾಡು ಸಮೃದ್ಧವಾಗಿ ಬೆಳೆಯಲಿದೆ. ನಿರೀಕ್ಷೆ ಮೀರಿ ಕೊಡುಗೆಗಳನ್ನು ಪಡೆಯಲಿದೆ ಎಂಬ ನಿಶ್ಚಲ ನಂಬಿಕೆ ನಮ್ಮದಾಗಿದೆ. ರಾಜ್ಯದ ಜನತೆಯ ಆಶೀರ್ವಾದದ ಬೆಂಬಲ ಮೋದಿ ಜೀ ಅವರ ಅಭಿವೃದ್ಧಿ ಕಾರ್ಯಗಳಿಗೆ ಶ್ರೀರಕ್ಷೆಯಾಗಲಿ ಹಾಗೂ ಸುಭದ್ರ ಭಾರತ ಕಟ್ಟುವ ಅವರ ಯೋಜನೆಗಳಿಗೆ ಬೆನ್ನೆಲುಬಾಗಲಿ ಎಂಬ ಹಾರೈಕೆಯೊಂದಿಗೆ ಮಾನ್ಯ ನರೇಂದ್ರ ಮೋದಿಯವರನ್ನು ಆತ್ಮೀಯವಾಗಿ ಅಭಿನಂದಿಸೋಣ ಎಂದಿದ್ದಾರೆ.

Post a comment

No Reviews