ಬೆಂಗಳೂರು: ನಾನು ತಪ್ಪು ಮಾಡಿದ್ರೆ ಇಷ್ಟು ವರ್ಷ ಸುದೀರ್ಘ ರಾಜಕೀಯ ಮಾಡೋಕೆ ಆಗಲ್ಲ. ಸತ್ಯಮೇವ ಜಯತೆ . ಜನರ ಆಶೀರ್ವಾದ ಇರೋವರೆಗೂ ಯಾರು ನನ್ನನ್ನ ಏನೂ ಮಾಡೋದಿಕ್ಕೆ ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘರ್ಜಿಸಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಉದ್ಘಾಟನೆ ಬಳಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಐದು ವರ್ಷ ಕಾಲ ಅಭಿವೃದ್ಧಿ ಮಾಡೇ ಮಾಡ್ತೀವಿ. ದೇವರಾಜ ಅರಸು ಬಿಟ್ಟರೆ ಐದು ವರ್ಷ ಪೂರ್ಣ ಅಧಿಕಾರ ಮಾಡಿದ್ದು ಬಿಟ್ಟರೆ, ನಂತರ ಐದು ವರ್ಷ ಸರ್ಕಾರ ಮಾಡಿದ್ದು ಈ ಸಿದ್ದರಾಮಯ್ಯ ಮಾತ್ರ. ತಾಯಿ ಚಾಮುಂಡಿ ಆಶೀರ್ವಾದ ನನ್ನ ಮೇಲೆ ಇದೆ. ಜಿಟಿಡಿ ಬೇರೆ ಪಕ್ಷದಲ್ಲಿ ಇದ್ದರೂ ಸತ್ಯದ ಮಾತು ಹೇಳಿದ್ದಾರೆ. ಸತ್ಯ ಮೇವ ಜಯತೆ. ಸತ್ಯಕ್ಕೆ ಯಾವಾಗಲೂ ಜಯ. ಜನರ ಆಶೀರ್ವಾದ ಸರ್ಕಾರದ ಮೇಲೆ ನನ್ನ ಮೇಲೆ ಇರುವವರೆಗೂ ನನ್ನನ್ನು ಯಾರು ಏನು ಮಾಡಲು ಆಗೋದಿಲ್ಲ ಎಂದರು.
ಜಿಟಿ ದೇವೇಗೌಡರೇ ನನ್ನನ್ನು ಈ ಕ್ಷೇತ್ರದಲ್ಲಿ ಸೋಲಿಸಿದ್ದು. ಅದು ನನ್ನ ಕೈಯಾರೆ ಮಾಡಿಕೊಂಡ ಸೋಲು. ನಾನು ಒಂಬತ್ತು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಚಾಮುಂಡೇಶ್ವರಿ ಕೃಪೆಯಿಂದ ಇಲ್ಲಿಯವರೆಗೆ ಇದ್ದೇನೆ. ನಾನು ಯಾವ ತಪ್ಪು ಮಾಡಿಲ್ಲ ಎಂದ ಸಿಎಂ ತಪ್ಪು ಮಾಡಿದ್ದರೆ ಇಷ್ಟು ಸುಧೀರ್ಘ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ಜಿಟಿಡಿ ಮಾತಿನಿಂದ ನನಗೆ ಹೆಚ್ಚು ಬಲ ಬಂದಿದೆ. ಅವರಿಗೆ ನನ್ನ ಧನ್ಯವಾದಗಳು. ಚಾಮುಂಡಿ ದೇವಿ ಕೊಟ್ಟ ಶಕ್ತಿಯಿಂದ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಚುನಾಯಿತ ಸರ್ಕಾರಗಳನ್ನು ವಾಮಮಾರ್ಗದಿಂದ ಕಿತ್ತೊಗೆಯುವುದು ತಪ್ಪು ಎಂದು ಹಂಪನಾ ಹೇಳಿರುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಬಹಳ ಮಹತ್ವ ಪೂರ್ಣವಾದದ್ದು ಎಂದು ಸಿದ್ದರಾಮಯ್ಯ ತಿಳಿಸಿದರು.
Post a comment
Log in to write reviews