
ನವದೆಹಲಿ; ನಟಿ ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಕ್ಬಾಲ್ ಜೂನ್ 23 ರಂದು ಮುಂಬೈನಲ್ಲಿ ದಾಪಂತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮಧ್ಯೆ ಸೋನಾಕ್ಷಿ ತಂದೆ, ಬಾಲಿವುಡ್ ನಟ ಶತ್ರುಘ್ನ ಈ ವಿಷಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಈವರೆಗೆ ಸೋನಾಕ್ಷಿ ಮತ್ತು ಇಕ್ಬಾಲ್ ಎಲ್ಲಿಯೂ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಈ ಬಗ್ಗೆ ನಟ ಶತ್ರುಘ್ನ ಸುದ್ದಿಗಾರರೊಂದಿಗೆ ಮಾತನಾಡಿ ಮಗಳು ಸೋನಾಕ್ಷಿ ಸಿನ್ಹಾ ಮದುವೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಅವಳ ಮದುವೆಯ ಬಗ್ಗೆ ನನಗೆ ಗೊತ್ತಿರುವುದು ಮಾಧ್ಯಮಗಳಿಂದ ಕೇಳಿದಷ್ಟು ಮಾತ್ರ. ನಾನು ಇದೀಗ ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶದ ನಂತರ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಮಾಧ್ಯಮಗಳಿಗೆ ಎಲ್ಲವೂ ತಿಳಿದಿದೆ. ನಿಮಗೆ ಗೊತ್ತಿಲ್ಲದಿದ್ದರೆ ಹೇಗೆ ಎಂದು ಅನೇಕ ಆಪ್ತರು ನನ್ನನ್ನು ಕೇಳುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.. ಇಂದಿನ ಮಕ್ಕಳು ಹೆತ್ತವರನ್ನು ಕೇಳುವುದಿಲ್ಲ. ನಾವೂ ಕೂಡ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.
ಸೋನಾಕ್ಷಿ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಅವಳು ಎಂದಿಗೂ ಕಾನೂನು ಬಾಹಿರ ಅಥವಾ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕನ್ನು ಅವಳು ಹೊಂದಿದ್ದಾಳೆ ಎಂದು ಅವರು ಹೇಳಿದ್ದಾರೆ.
Poll (Public Option)

Post a comment
Log in to write reviews