
ಸಂಡೂರು ಕ್ಷೇತ್ರಕ್ಕೆ ಶ್ರೀರಾಮುಲು ಆಕಾಂಕ್ಷಿ ಎಂದು ಹೇಳುತ್ತಿರವ ಉಹಾಪೋಹಗಳಿಗೆ ಶ್ರೀರಾಮುಲು ಅವರು ಸ್ಪಷ್ಟನೆ ನೀಡಿದ್ದಾರೆ. ಸಂಡೂರು ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಲ್ಲ, ಅಭ್ಯರ್ಥಿಯೂ ಅಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ಸಂಡೂರು ಸೇರಿದಂತೆ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಅಭ್ಯರ್ಥಿಗಳ ಊಹಾಪೋಹಗಳು ಶುರುವಾಗಿದೆ, ರಾಜಕೀಯ ವಲಯದಲ್ಲಿ ಸಂಡೂರಿನಿಂದ ಶ್ರೀರಾಮುಲು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ರಾಜ್ಯದಲ್ಲಿ ಪಕ್ಷದ ಸಂಘಟನೆಯಷ್ಟೇ ನನ್ನ ಮುಂದಿನ ಹೆಜ್ಜೆಯಾಗಿರಲಿದೆ, ನಾನು ಸ್ಪರ್ಧೆ ಮಾಡುವ ಕುರಿತು ಯಾವ ಚರ್ಚೆಯೂ ನಡೆಸಿಲ್ಲ, ಕಾರ್ಯಕರ್ತರಲ್ಲಿ ಈ ಕುರಿತು ಯಾವುದೇ ಗೊಂದಲ ಬೇಡ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸಾಮಾನ್ಯ ಕಾರ್ಯಕರ್ತರಾಗಿ ಸಂಡೂರು ಗೆಲುವಿಗೆ ಶ್ರಮಿಸುತ್ತೇವೆ, ಮತ್ತೆ ಬಳ್ಳಾರಿ ಬಿಜೆಪಿ ಭದ್ರಕೋಟೆಯಾಗಲಿದೆ. ಇನ್ನೂ ಸಂಡೂರು ಸೇರಿ 3 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬುದೇ ನಮ್ಮ ಗುರಿಯಾಗಿದೆ, ಬಳ್ಳಾರಿಯಿಂದ ಕಾಂಗ್ರೆಸ್ ಗೇಟ್ ಪಾಸ್‌ಗೆ ಸಿದ್ಧವಾಗಿದೆ, ಜಮೀರ್ ಅಲ್ಲ, ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ನಿಂತರೂ ಈ ಬಾರಿ ಗೆಲುವು ಬಿಜೆಪಿಯದ್ದೇ. ನಮ್ಮ ಕಾರ್ಯಕರ್ತನ ಶಕ್ತಿ ಮುಂದೆ ಕಾಂಗ್ರೆಸ್ ಧೂಳೀಪಟ ಆಗಲಿದೆ ಎಂದು ಹೇಳಿದರು.
Poll (Public Option)

Post a comment
Log in to write reviews