
ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ವಿಡಿಯೋವನ್ನು ಶೇರ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿ ಇರುತ್ತಿದ್ದ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್‌ಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ವಿಕ್ಕಿಪೀಡಿಯಾ ವಿಕಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡ್ರಗ್ಸ್ ಪದ ಬಳಸಿದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಇದೇ ರೀಲ್ಸ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.
ವಿಡಿಯೋದಲ್ಲಿ ಡ್ರಗ್ಸ್ ಪದ ಬಳಕೆ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮೆಂಟ್ ಮಾಡುವ ಮೂಲಕ ಡ್ರಗ್ಸ್ ಪದ ಬಳಕೆಗೆ ಆಕ್ಷೇಪಿಸಿದ್ದರು. ಹಾಗಾಗಿ ಈ ಬಗ್ಗೆ ಬಿಸಿಪಿ ಸೋಷಿಯಲ್ ಮೀಡಿಯಾ ವಿಂಗ್ ನಿಂದ ಪರಿಶೀಲನೆ ಮಾಡಿದ್ದಾರೆ. ನಂತರ ಬೈಯ್ಯಪ್ಪನಹಳ್ಳಿ ಪೊಲೀಸರಿಗೆ ವಿಡಿಯೋ ಪರಿಶೀಲನೆ ನಡೆಸಿ ತೆಗೆಯುವಂತೆ ಸೂಚನೆ ನೀಡಿದೆ. ಹಾಗಾಗಿ ಪೊಲೀಸರು ಪೋನ್ ಮೂಲಕ ಸೂಚನೆ ನೀಡಿ ವಿಡಿಯೋ ತೆಗೆಸಿದ್ದಾರೆ.
Poll (Public Option)

Post a comment
Log in to write reviews