
ಹಾಸನ: ಜನರು ನೀಡಿರುವ ಸಹಕಾರಕ್ಕೆ ನಾನು ಬದುಕಿರುವವರೆಗೂ ಋಣಿಯಾಗಿರುತ್ತೇನೆ. ನಮ್ಮ ಕಾರ್ಯಕರ್ತರ ನನ್ನ ಕಷ್ಟಕಾಲದಲ್ಲಿ ಯಾವಾಗಲೂ ಜೊತೆಗೆ ನಿಂತಿದ್ದಾರೆ. ಅವರ ಋಣ ನನ್ನ ಮೇಲಿದೆ. ಅವರ ಕಷ್ಟಕ್ಕೆ ನಾನು ಅವರ ಜೊತೆ ನಿಲ್ಲುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ಹೊಳೆನರಸೀಪುರದಲ್ಲಿ ಮಾತನಾಡಿದ ಅವರು ರಾಜ್ಯದ ಜನರು ಹಾಗೂ ಹೊಳೆನರಸೀಪುರದ ಜನರು ದೇವೇಗೌಡರಿಗೆ ಅರವತ್ತು ವರ್ಷದಿಂದ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ದೇವೇಗೌಡರಂತೆ ಕುಮಾರಸ್ವಾಮಿಗೆ ಹಾಗೂ ನನಗೆ ಮತ್ತು ನಮ್ಮ ಕುಟುಂಬಕ್ಕೆ ಶಕ್ತಿ ಕೊಟ್ಟಿದ್ದಾರೆ. ಇಪ್ಪತ್ತೈದು ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಹೊಳೆನರಸೀಪುರ ತಾಲ್ಲೂಕಿನ ಹಾಗೂ ಹಾಸನ ಜಿಲ್ಲೆಯ ಜನರ ಜತೆ ನಾನು ಬದುಕಿರುವವರೆಗೂ ಇರುತ್ತೇನೆ. ನಿಮ್ಮ ಜತೆ ನಾನು, ದೇವೇಗೌಡರು, ಕುಮಾರಸ್ವಾಮಿ ಹಾಗೂ ನಮ್ಮ ಕುಟುಂಬ ಇರುತ್ತದೆ. ಯಾರೂ ದೃತಿಗೆಡಬೇಕಾದ ಪ್ರಮೇಯವಿಲ್ಲ. ಜಿಲ್ಲೆಯ ಜನ ನನಗೆ ಸಹಕಾರ ಕೊಟ್ಟಿದ್ದಾರೆ. ಆ ಸಹಕಾರಕ್ಕೆ ನಾನು ಋಣಿಯಾಗಿರುತ್ತೇನೆ ಎಂದರು.
Poll (Public Option)

Post a comment
Log in to write reviews