2024-12-24 06:19:26

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭಾರತಕ್ಕೆ ಭರ್ಜರಿ 47 ರನ್‌ಗಳ ಜಯ..! ವಿಶ್ವ ಯುದ್ಧದಲ್ಲಿ ಸೋಲಿಲ್ಲದ ಸರದಾರ ಭಾರತ!

ವೆಸ್ಟ್ ಇಂಡೀಸ್: ಟಿ20 ವಿಶ್ವಕಪ್ ನ ಸೂಪರ್ 8 ಸುತ್ತಿನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಜೂನ್ 20‌ ರಂದು ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 181 ರನ್ ಕಲೆಹಾಕಿತ್ತು. ಈ ರನ್‌ ಬೆನ್ನಟ್ಟಿದ ಅಫ್ಘಾನಿಸ್ತಾನ 134 ರನ್‌ ಕಲೆಹಾಕುವ ಮೂಲಕ ತನ್ನೆಲ್ಲಾ ವಿಕೆಟ್‌ಗಳನ್ನ ಕಳೆದುಕೊಳ್ಳುವುದರೊಂದಿಗೆ 47 ರನ್‌ಗಳ ಸೋಲನ್ನ ಒಪ್ಪಿಕೊಂಡಿತು.

ಇದರೊಂದಿಗೆ ಭಾರತ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸತತ 4 ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಅಜೇಯದ ಓಟವನ್ನು ಮುಂದುವರೆಸಿದೆ. ಸೂಪರ್ 8 ಹಂತದ ಪಂದ್ಯಾವಳಿಯಲ್ಲಿ ಭಾರತ ತಂಡ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Post a comment

No Reviews