
ಹುಬ್ಬಳ್ಳಿ-ಧಾರವಾಡ: ವಿದ್ಯೆ ಮತ್ತು ಸಂಸ್ಕೃತಿಗೆ ಹುಬ್ಬಳ್ಳಿ-ಧಾರವಾಡ ಹೆಸರುವಾಸಿ. ಆದರೆ, ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ನಿರಂತರ ಹತ್ಯೆ ಶೋಷಣೆಯಿಂದ ಕೆಟ್ಟ ಹೆಸರು ಪಡ್ಕೊಳ್ತಿದೆ.
ಏಪ್ರಿಲ್ 18 ರಂದು ಹುಬ್ಬಳ್ಳಿಯ ನೇಹಾ ಹಿರೆಮಠ ಕೊಲೆ ಪ್ರಕರಣ ಇಡೀ ರಾಜ್ಯದಲ್ಲಿ ಸುದ್ಧಿಯಾಗಿತ್ತು, ಇದಾದ ಬಳಿಕ ಸದ್ದಾಮ್ ಹುಸೇನ್ ಎನ್ನುವ ಯುವಕ ಅಪ್ರಾಪ್ತೆಯನ್ನು ಅತ್ಯಾಚಾರವೆಸಗಿ ಅವಳಿಗೆ ಬ್ಲ್ಯಾಕ್ ಮೇಲ್ ಮಾಡಿ ಮತ್ತು ಅವರ ಪೋಷಕರಿಗೂ ಬೆದರಿಕೆ ಹಾಕಿದ್ದು ಅಷ್ಟೆ ಅಲ್ಲದೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ತುಂಬಾ ಚಚೆ೯ಯಾಗಿತ್ತು . ಇದು ಮಾಸುವ ಮೊದಲೇ ಮೇ 15 ರಂದು ಗಿರೀಶ್ ಎಂಬಾತ, ಕೇಟರಿಂಗ್ ಕೆಲಸ ಮಾಡುತ್ತಿದ್ದ 20ವಷ೯ದ ಅಂಜಲಿ ಅಂಬಿಗೇರ್ ಎಂಬ ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಬಬ೯ರವಾಗಿ ಕೊಂದಿದ್ದಾನೆ.
ನೇಹಾ ಸಾವಾದಾಗಲೇ ಪೊಲೀಸರು ಎಚ್ಚೆತ್ತುಕೊಂಡಿದ್ದರೆ ಅಂಜಲಿ ಅಂಬಿಗೇರ್ ಕೊಲೆ ನಡೆಯುತ್ತಲೇ ಇರಲಿಲ್ಲ, ನಗರದಲ್ಲಿ ಇಷ್ಟೆಲ್ಲಾ ಅಪರಾಧ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸರು ಮಾತ್ರ ಇಂತಹ ಘಟನೆ ನಡೆಯದಂತೆ ಯಾವುದೇ ಕ್ರಮ ಕೈಗೊಂಡಂತೆ ಕಾಣುತಿಲ್ಲ.
ಜನವರಿಯಿಂದ ಇಲ್ಲಿಯವರೆಗೆ ಬರೊಬ್ಬರಿ 13 ಕೊಲೆಗಳು ನಡೆದಿದೆ:
2024ರ ಫೆಬ್ರವರಿ ತಿಂಗಳಿಲ್ಲೆ ಧಾರವಾಡದಲ್ಲಿ 6 ಕೊಲೆ ನಡೆದಿವೆ, ಈ ಪೈಕಿ 3 ಕೊಲೆಗಳು ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ನಡೆದಿದೆ, ಆದರೂ ಆರೋಪಿಗಳನ್ನ ಇನ್ನೂ ಹುಡುಕುವದರಲ್ಲೆ ಇದ್ದಾರೆ.
Poll (Public Option)

Post a comment
Log in to write reviews