ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ : BCAS ಸಹಾಯಕ ಪ್ರಾದೇಶಿಕ ಕಾರ್ಯಾಲಯ ಸ್ಥಾಪನೆಗೆ ಕೇಂದ್ರ ಅಸ್ತು
ಹುಬ್ಬಳ್ಳಿ: ಜಿಲ್ಲೆಯ ವಿಮಾನ ನಿಲ್ದಾಣದಲ್ಲಿ ARO ( Asst.Regional office of BCAS) ಬ್ಯುರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿಯ ಸಹಾಯಕ ಪ್ರಾದೇಶಿಕ ಕಾರ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಅನೋಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಪ್ರಲ್ಹಾದ್ ಜೋಶಿ ಅವರು, ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಹಾಯಕ ಪ್ರಾದೇಶಿಕ ಕಾರ್ಯಾಲಯ ಆರಂಭಿಸಲು ಈ ಹಿಂದಿನ ನಾಗರಿಕ ವಿಮಾನಯಾನ ಕೇಂದ್ರ ಸಚಿವ ಜ್ಯೋತಿರಾದಿತ್ಯ ಶಿಂಧೆ ಅವರಿಗೆ ನಾನು ಜನವರಿ 2024ರಲ್ಲಿ ವಿನಂತಿಸಿಕೊಂಡಿದೆ. ನಮ್ಮ ಮನವಿಗೆ ಸ್ಪಂದಿಸಿ ಏಪ್ರಿಲ್ 2024ರಲ್ಲಿ ಸಹಾಯಕ ಪ್ರಾದೇಶಿಕ ಕಾರ್ಯಾಲಯವನ್ನು ಆರಂಭಿಸಲು ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿತ್ತು ಎಂದರು.
ಈಗ ಕೇಂದ್ರದ ಹಣಕಾಸು ಸಚಿವಾಲಯವು ಹೊಸ ಹುದ್ದೆಗಳ ಮಂಜೂರಾತಿಗೆ ಅನುಮತಿ ನೀಡಿದ್ದು ಹುಬ್ಬಳ್ಳಿಯ ಎ.ಆರ್.ಓ ಕಚೇರಿಗೆ ಕಾರ್ಯ ಆರಂಭಿಸಲಿದೆ. ಇನ್ನು ಮುಂದೆ ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯ ಮತ್ತು ಭದ್ರತೆ ಕುರಿತು ಬೆಂಗಳೂರು ಕಾರ್ಯಾಲಯದ ಅವಲಂಬನೆಯ ತಪ್ಪುತ್ತದೆ. ಉತ್ತರ ಕರ್ನಾಟಕದ ಇನ್ನಿತರ ವಿಮಾನ ನಿಲ್ದಾಣಗಳು ಸಹಿತ ಸೆಕ್ಯೂರಿಟಿ ಕುರಿತು ಹುಬ್ಬಳ್ಳಿ ಎ.ಆರ್. ಓ ಕಚೇರಿಯೊಂದಿಗೆ ವ್ಯವಹರಿಸಲಿವೆ ಎಂದು ತಿಳಿಸಿದರು.
Post a comment
Log in to write reviews