ವಾಹನ ಸವಾರರಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಕೆಗೆ ಈ ಹಿಂದೆ RTO ಮೇ 31ರ ವರೆಗೆ ನೀಡಿದ್ದ ಗಡುವನ್ನು ಈಗ ಜೂನ್ 12 ಕ್ಕೆ ಮುಂದೂಡಿದೆ.
2019 ಏಪ್ರಿಲ್ 1ರ ಮುನ್ನ ನೊಂದಣಿಯಾದ ಎಲ್ಲಾ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂಬ ನಿಯಮವನ್ನು ಕರ್ನಾಟಕ ಸಾರಿಗೆ ಇಲಾಖೆಯ ಹೊರಡಿಸಿತ್ತು. ಈ ನಿಮಯವನ್ನು ಸರ್ಕಾರ ಕಳೆದ ವರ್ಷವೇ ಹೊರಡಿಸಿದ್ದರೂ ಸವಾರರು ಇದರ ಬಗ್ಗೆ ಉತ್ಸಾಹ ತೋರದಿರುವ ಕಾರಣ ಈ ಗಡುವನ್ನು ಸರ್ಕಾರ ಮತ್ತೆ ಮುಂದೂಡಿದೆ.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ದ್ವಿಚಕ್ರ ವಾಹನಗಳಿಗೆ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ತೆಗೆದುಕೊಳ್ಳುವ ಶುಲ್ಕದಲ್ಲಿ ವ್ಯತ್ಯಾಸವಿರುತ್ತದೆ. ಇದರಲ್ಲಿ ದ್ವಿಚಕ್ರ ವಾಹನಗಳಿಗೆ 500 ರಿಂದ 600ರ ವರೆಗೆ ಶುಲ್ಕ ನಿಗದಿಸಿದ್ದರೆ, ನಾಲ್ಕು ಚಕ್ರ ವಾಹನಗಳಿಗೆ 700 ರಿಂದ 800 ರೂ ವರೆಗೆ ಶುಲ್ಕವನ್ನು ನಿಗದಿ ಪಡಿಸಿರುತ್ತಾರೆ.
ಸರ್ಕಾರ ನೀಡಿದ ಗಡುವು ಮುಗಿದ ನಂತರವು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದೇ ಇದ್ದರೆ ವಾಹನ ಮಾಲೀಕರಿಗೆ ಮುಲಾಜಿಲ್ಲದೆ 1000 ರೂ ದಂಡ ಬೀಳಲಿದೆ ಎಚ್ಚರ.
Post a comment
Log in to write reviews