
ಬೆಂಗಳೂರು :ದರ್ಶನ್ ಭೇಟಿಗೆ ಅವಕಾಶ ಸಿಗದೆ ವಾಪಸ್ ಆದ ಸಾಧು ಕೋಕಿಲ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜೈಲಿನಲ್ಲಿರುವ ದರ್ಶನ್ ಭೇಟಿಗೆ ಸ್ಯಾಂಡಲ್‌ವುಡ್‌ನ ಅನೇಕ ನಟ, ನಟಿಯರು ಪರಪ್ಪನ ಅಗ್ರಹಾರದತ್ತ ತೆರಳುತ್ತಿದ್ದಾರೆ. ಆದರೆ, ಇಂದು ದರ್ಶನ್ ಭೇಟಿಗೆ ಆಗಮಿಸಿದ್ದ ಸಾಧು ಕೋಕಿಲ ಅವರಿಗೆ ಭಾರೀ ನಿರಾಸೆಯಾಗಿದೆ.
ದರ್ಶನ್ ಭೇಟಿಗೆ ಅವಕಾಶ ಸಿಗದೆ ವಾಪಸ್ ಆದ ಸಾಧು ಕೋಕಿಲ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನಾನು ಇಂದು ಭೇಟಿ ಮಾಡಿದರೆ ಕುಟುಂಬದವರಿಗೆ ಅವಕಾಶ ಸಿಗುವುದಿಲ್ಲ. ಹೀಗಾಗಿ ನಾನು ಗುರುವಾರ ದರ್ಶನ್ ಕುಟುಂಬದವರ ಜೊತೆ ಬಂದು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ವಾರಕ್ಕೆ ಎರಡೇ ವಿಸಿಟ್‌ಗೆ ಅವಕಾಶ ಇರುವ ಹಿನ್ನೆಲೆ ಆದರೆ ದರ್ಶನ್ ಭೇಟಿಗೆ ಸಾಧು ಕೋಕಿಲಗೆ ಅವಕಾಶ ಸಿಕ್ಕಿಲ್ಲ. ಈ ವಾರ ಈಗಾಗಲೇ ಒಂದು ಬಾರಿ ದಿನಕರ್ ತೂಗುದೀಪ್ ಕುಟುಂಬ ಜೈಲಿಗೆ ಭೇಟಿ ನೀಡಿದ್ದು, ಇವರ ಜೊತೆ ವಿನೋದ್ ರಾಜ್ ಕೂಡ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.
Poll (Public Option)

Post a comment
Log in to write reviews